ಕಾರವಾರ: ಕೊರೊನ ಸೋಂಕಿನಿAದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರಕ್ಕೆ ಸ್ಥಳೀಯರು ಅಡ್ಡಿಪಡಿಸಿದ ಘಟನೆ
ಕಾರವಾರದಲ್ಲಿ ನಡೆದಿದೆ.
ಶಿರಸಿ ಮೂಲದ ಕೊರೊನಾ ಸೋಂಕಿತ ವ್ಯಕ್ತಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರ ಶವವನ್ನು ಕಳೆದ ರಾತ್ರಿ ಅಂತ್ಯ ಸಂಸ್ಕಾರಕ್ಕೆ ಜಿಲ್ಲಾಡಳಿತ ತಯಾರಿ ನಡೆಸಿತ್ತು. ಕಾರವಾರ ನಗರದ ಸರ್ವೋದಯ ನಗರದಲ್ಲಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ತಯಾರಿ ನಡೆಸಲಾಗಿತ್ತು.
ಆದರೆ, ಶವ ಸಂಸ್ಕಾರಕ್ಕೆ ಸರ್ವೋದಯನಗರ ಸೇರಿ ಅಕ್ಕಪಕ್ಕದ ಬಡಾವಣೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳದ ಸುತ್ತಲು ಪೋಲಿಸ್ ಸರ್ಪಗಾವಲು ಹಾಕಲಾಗಿದೆ.
ಸ್ಥಳೀಯ ಶಾಸಕರೇ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಕ್ರುಬಾಗ ಅರಗಾದಲ್ಲಿರುವ ಬೋಡಿ ಚಿತಾಗಾರದಲ್ಲಿ ಅಂತ್ಯಸAಸ್ಕಾರ ಮಾಡಲಾಗಿದೆ.