ಜೈಪುರ: ಮಹಾಮಾರಿ ಕೊರೊನಾ ವೈರಸ್ ನಾಶಪಡಿಸುವ ಶಕ್ತಿ ಹೊಂದಿದೆ ಎಂದು ಹೇಳಿ ಆಯುರ್ವೇದ ಔಷಧಿ ಕೊರೊನಿಲ್ ಬಿಡುಗಡೆ ಮಾಡಿದ್ದ ಯೋಗ ಗುರು ಬಾಬಾ ರಾಮದೇವ್ ವಿರುದ್ಧ ರಾಜಸ್ಥಾನದಲ್ಲಿ ಎಫ್‍ಐಆರ್ ದಾಖಲಾಗಿದೆ.
ಪತಂಜಲಿ ಯೋಗ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಿಲ್ ಔಷಧವನ್ನು ಬಾಬಾ ರಾಮದೇವ್ ಮಂಗಳವಾರ ಬಿಡುಗಡೆ ಮಾಡಿದ್ದರು. ಆದರೆ, ಈ ಈ ಔಷಧ ಬಿಡುಗಡೆ ಹಾಗೂ ಜಾಹೀರಾತು ನೀಡುವ ಮುನ್ನ ಕೇಂದ್ರದ ಅಯುಷ್ ಸಚಿವಾಲಯದ ಅನುಮತಿ ಪಡೆದಿಲ್ಲ. ಹೀಗಾಗಿ ಔಷಧ ಬಿಡುಗಡೆ ಮಾಡಿದ ಆರೋಪದ ಮೇರೆಗೆ ಬಾಬಾ ರಾಮದೇವ್, ಪತಂಜಲಿ ಸಿಇಒ ಬಾಲಕೃಷ್ಣ, ವಿಜ್ಞಾನಿ ಅನುರಾಗ್ ವಾಸ್ರ್ನೆ, ನಿಮ್ಸ್ ಆಸ್ಪತ್ರೆ ಅಧ್ಯಕ್ಷ ಡಾ.ಬಲಬೀರ್ ಸಿಂಗ್ ತೋಮರ್ ಹಾಗೂ ನಿರ್ದೇಶಕ ಡಾ.ಅನುರಾಗ್ ತೋಮರ್ ವಿರುದ್ಧ ರಾಜಸ್ಥಾನದ ಜೈಪುರ ನಗರದ ಜ್ಯೋತಿ ನಗರ್ ಒಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಬಾಬಾ ರಾಮ್‍ದೇವ್ ಬಿಡುಗಡೆ ಮಾಡಿದ ಕೊರೊನಿಲ್ ಔಷಧವನ್ನು ಎಷ್ಟು ಜನರ ಮೇಲೆ ಪ್ರಯೋಗ ಮಾಡಲಾಗಿದೆ ಎಂಬುದರ ಸಂಪೂರ್ಣ ಮಾಹಿತಿ ನೀಡಬೇಕು. ಅಲ್ಲಿಯವರೆಗೆ ಕೊರೊನಿಲ್ ಔಷಧ ಮಾರಾಟ ಹಗೂ ಜಾಹೀರಾತು ಪ್ರದರ್ಶನ ತಡೆಯುವಂತೆ ಆಯುಷ್ ಮಂತ್ರಾಲಯ ಸೂಚನೆ ನೀಡಿದೆ.
ಈ ಸೂಚನೆ ಬೆನ್ನಲ್ಲೇ, ರಾಮ್ ದೇವ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಇತ್ತೀಚೆಗೆ ಕೋವಿಡ್-19 ಚಿಕಿತ್ಸೆಗೆ ಪತಂಜಲಿ ಸಂಸ್ಥೆ ಔಷಧಿ ಸಿದ್ದಪಡಿಸಿದೆ ಎಂದು ಹೇಳಿದ್ದ ಬಾಬಾ ರಾಮ್ ದೇವ್, ಬಾಲಕೃಷ್ಣ ವಿರುದ್ಧ ಬಿಹಾರ ಕೋರ್ಟ್‍ನಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿತ್ತು.
ಆದರೆ, ಔಷಧ ಬಿಡುಗಡೆಗೂ ಮುನ್ನ ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಪ್ರಯೋಗದಿಂ ಸಕಾರಾತ್ಮಕ ಫಲಿತಾಂಶ ಬಂದ ನಂತರವೇ ಔಷಧ ಬಿಡುಗಡೆ ಮಾಡಿದ್ದೇವೆ. ಇದಕ್ಕೆ ಅಗತ್ಯವಿರುವ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ರಾಜಸ್ಥಾನದ ನಿಮ್ಸ್ ವಿಶ್ವವಿದ್ಯಾಲಯ ಹೇಳಿದೆ.
ಗಗನಕ್ಕೇರಿದ ಇಂಧನ ದರ: ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಲು ರಾಜ್ಯ ಸರ್ಕಾರದ ಮೇಲೆ ಹೆಚ್ಚಿದ ಜನಾಕ್ರೋಶ
ಬೆಂಗಳೂರು: ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡುವ ಮೂಲಕ ದೇಶದ ಜನತೆಗೆ ತುಸು ನೆಮ್ಮದಿ ನೀಡಿದೆ. ಕೇಂದ್ರದ ಈ ನಡೆ...








