ಹುಬ್ಬಳ್ಳಿ: ವಿಧಾನಪರಿಷತ್ ನಲ್ಲಿ ಗಲಾಟೆಯಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಚಿಕೇಗೇಡು ಸಂಗತಿಯಾಗಿದೆ. ಸಭಾಪತಿಗಳ ವಿರುದ್ಧ ಅವಿಶ್ವಾಸ ಮಂಡಿಸಲು ಜೆಪಿಯವರು ಮೊದಲು ನೋಟಿಸ್ ನೀಡಿ ಕಾನೂನು ಹೋರಾಟ ಮಾಡಬೇಕಿತ್ತು. ಬಿಲ್ ಪಾಸ್ ಮಾಡುವ ನಿಟ್ಟಿನಲ್ಲಿ ತರಾತುರಿಯಲ್ಲಿ ಸಭಾಪತಿ ಸ್ಥಾನದಲ್ಲಿ ಕುಳಿತಿದ್ದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರ ಪದಚ್ಯುಚಿಗೆಂದು ಬಿಜೆಪಿಯವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಆದ್ರೆ ಪ್ರತಾಪ ಶೆಟ್ಟಿಯವರಿಗೆ ಅಧಿಕಾರದ ಆಸೆಯಿಲ್ಲ. ಅವರು ಅಧಿಕಾರಕ್ಕೆ ಅಂಟಿಕೊಳ್ಳುವವರಲ್ಲ. ಸಭಾಪತಿಯವರು ಬರುವ ಮುನ್ನವೇ ಸದನ ಅರಂಭ ಯಾಕೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಮೇಲ್ಮನೆಯಲ್ಲಿ ಕಾಂಗ್ರೆಸ್‍ಗೆ ಸಂಖ್ಯಾಬಲ ಇಲ್ಲ ಅಂತ ಗೊತ್ತಿದೆ. ಒಂದು ವರ್ಗವನ್ನ ಸೀಮಿತ ಮಾಡಿಕೊಂಡು ಗೋಹತ್ಯೆ ನಿಷೇಧ ಮಸೂದೆ ಜಾರಿ ಮಾಡುತ್ತಿದ್ದಾರೆ. ಅವರು ಎನು ಮಾಡ್ತಾರೆ ಮಾಡಲಿ ನೋಡೋಣ. ಗೋಹತ್ಯೆ ಮಸೂದೆ ಜಾರಿಯಿಂದ ರೈತ ಸಮುದಾಯಕ್ಕೆ ಅನ್ಯಾಯವಾಗಲಿದೆ, ಇದನ್ನ ನಾವು ವಿರೋಧಿಸುತ್ತೇವೆ ಎಂದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದಿಂದ ಹೊರ ಹೋಗುವವರು ಹೋಗ್ತಾರೆ, ಯಾರು ಪಕ್ಷ ಬಿಟ್ಟರೂ ಕಾಂಗ್ರೆಸ್ ಪಕ್ಷ ಇರುತ್ತೆ. ನಾನು ಪಕ್ಷ ಬಿಟ್ಟು ಹೋದ್ರು ಕಾಂಗ್ರೆಸ್ ಪಕ್ಷ ಯಾವಾಗಲೂ ಇರುತ್ತೆ ಎಂದು ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel