ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಗೈರಾದ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನಡೆಸಲು ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.
ಮೊದಲ ಬಾರಿಗೆ ಅಂದಾಜು 9 ಸಾವಿರದಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದಾರೆ. ವೆಬ್ ಕಾಸ್ಟಿಂಗ್, ಸಿಸಿಟಿವಿ ಭಯ, ಪರೀಕ್ಷೆಯ ಭಯದಿಂದ ಹಲವರು ಪರೀಕ್ಷೆಗೆ ಹಾಜರಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬೋರ್ಡ್ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವಂತೆ ಆರೋಗ್ಯ ಇಲಾಖೆ (Health Department) ಹಾಗೂ ಮಕ್ಕಳ ಹಕ್ಕುಗಳ ಇಲಾಖೆಯ (Department of Child Rights) ಮೊರೆ ಹೋಗಿದೆ.
ಹೀಗಾಗಿ ಗೈರಾದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯೊಂದಿಗೆ ಮಕಕ್ಕಳ ಹಕ್ಕುಗಳ ಆಯೋಗ ಕೌನ್ಸೆಲಿಂಗ್ ನಡೆಸಲಿದೆ. ಈ ಬಾರಿ ಸಿಸಿಟಿವಿ ಸೇರಿದಂತೆ ನಾನಾ ಕಾರಣಗಳಿಂದ ಭಯ ಬಿದ್ದ ಮಕ್ಕಳು ಪರೀಕ್ಷೆಗೆ ಹಾಜರಾಗಿಲ್ಲ ಎನ್ನಲಾಗುತ್ತಿದೆ. ಪೋಷಕರು ಕೂಡ ಭಯಬೀತರಾಗಿದ್ದರು. ಹೀಗಾಗಿಯೇ ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಎಸ್ಸೆಸ್ಸೆಲ್ಸಿ ಬೋರ್ಡ್ ಈ ನಿರ್ಧಾರಕ್ಕೆ ಬಂದಿದೆ.