ಕೇವಲ ೭೦ ಸ್ಥಾನಗಳನ್ನು ಹೊಂದಿರೋ ದೆಹಲಿ ಸದ್ಯ ದೇಶದಾದ್ಯಂತ ಕುತೂಹಲ ಮೂಡಿಸಿರೋದು ಹಾಟ್ ಟಾಪಿಕ್, ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದ ಕ್ಲೈಮಾಕ್ಸ್ ಹಂತ ತಲುಪಿದೆ. ಈಗಾಗಲೇ ಸರ್ವೇಗಳ ಪ್ರಕಾರ ಗೆಲುವಿನ ಕೇಕೆ ಹಾಕ್ತಿರೋ ಆಪ್ ಪಕ್ಷ ದೆಹಲಿ ಗದ್ದುಗೆ ಏರಲು ಮುಹೂರ್ತ ನೋಡ್ತಿದೆ. ಇತ್ತ ಏನಾದ್ರೂ ಮಾಡಿ ಈ ಬಾರಿ ಗದ್ದುಗೆ ಏರಲೇಬೇಕು ಅಂದುಕೊoಡಿರೋ ಬಿಜೆಪಿ ಅದೃಷ್ಟದ ಪರೀಕ್ಷೆಗೆ ಇಳಿದಿದೆ, ಇನ್ನೂ ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋದನ್ನ ಅವರೇ ಒಪ್ಪಿದ್ದಾರೆ. ಏನೇ ಇರಲಿ ದಿಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಾಳೆ ಬೆಳಗ್ಗೆ ೮ ಗಂಟೆಯಿoದ ಶುರುವಾಗಲಿದ್ದು, ಮತ ಎಣಿಕೆಗೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಫೆಬ್ರವರಿ ೮ರಂದು ನಡೆದಿದ್ದ ಈ ಎಲೆಕ್ಷನ್ ಯಾವ ಪಕ್ಷಕ್ಕೆ ಸಿಹಿ, ಯಾವ ಪಕ್ಷಕ್ಕೆ ಕಹಿ ಅನ್ನೋದು ನಾಳೆ ಗೊತ್ತಾಗಲಿದೆ.
ಪಶ್ಚಿಮ ಬಂಗಾಳ ಚುನಾವಣಾ ರಣರಂಗದಲ್ಲಿ ದೀದಿ ಆರ್ಭಟ : ಬಿಜೆಪಿ ವಿರುದ್ಧ ಸಿಡಿದೆದ್ದ ಮಮತಾ ಬ್ಯಾನರ್ಜಿಯಿಂದ ಟಿಎಂಸಿ ಪ್ರಣಾಳಿಕೆ ಬಿಡುಗಡೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ರಣಕಹಳೆ ಜೋರಾಗಿ ಮೊಳಗಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ತುದಿಗಾಲಿನಲ್ಲಿ ನಿಂತಿರುವ ಬೆನ್ನಲ್ಲೇ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಹಾಗೂ ಮುಖ್ಯಮಂತ್ರಿ...








