ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ನೀಡುವ ದೇಶಗಳು ಯಾವ್ಯಾವು ಗೊತ್ತಾ…? ಈ ಲಿಸ್ಟ್ ನಲ್ಲಿ ಅಮೆರಿಕಾವು ಇಲ್ಲಾ..!
ಮಂತ್ ಎಂಡ್ ಬರ್ತಿದ್ದ ಹಾಗೆ ಎಲ್ರ ಜೇಬು ಖಾಲಿಯಾಗಿರುತ್ತೆ. ಜೇಬಲ್ಲಿ ದುಡ್ಡಿಲ್ದೇ ಟೆನ್ಷನ್ ಶುರುವಾಗುತ್ತೆ. ದಿನ ನಿದ್ದೆ ಮಾಡಿ ಮುಂಜಾನೆ ಎದ್ದ ತಕ್ಷಣ ಮನದಲ್ಲಿ ಒಂದೇ ಟಾಟ್ ಓಡೋದು. ಜಾಸ್ತಿ ಬೇಡ ಸ್ವಲ್ಪನಾದ್ರೂ ಸ್ಯಾಲರಿ ಹೆಚ್ಚಾಗ ಬಾರದಾ ಅಂತ.. ಹೌದಾ ಇಲ್ವಾ.. ಆದ್ರೆ ಈ ಕನಸು ನನಸಾಗೋದು ತುಂಬಾನೇ ಕಷ್ಟ.
ಹಾಗಾದ್ರೆ ನಾವಿವತ್ತು ಪ್ರಪಂಚದಲ್ಲಿ ಅತಿ ಹೆಚ್ಚು ಸ್ಯಾಲರಿ ನೀಡುವ ದೇಶಗಳ ಬಗ್ಗೆ ಇವತ್ತು ತಿಳಿಯೋಣ. ಕೆಲವೊಂದು ದೆಶಗಳಲ್ಲಿ ಚಿಕ್ಕ ಕೆಲಸದಿಮದ ಹಿಡಿದು ದೊಡ್ಡ ನೌಖರಿಗಳ ವರೆಗೂ ಕೈತುಂಬ ಸ್ಯಾಲರಿ ನೀಡ್ತಾರೆ. ಅಂತಹ ರಾಷ್ಟ್ರಗಳು ಯಾವಿರಬಹುದು, ಅಲ್ಲಿನ ಕೆಲ ವಿಷೇಶತೆಗಳು ಇಂಟರೆಸ್ಟಿಂಗ್ ಫ್ಯಾಕ್ಟ್ ಗಳ ಬಗ್ಗೆ ಮಾಹಿತಿ ತಿಳಿಯೋಣ,.
ಹಾಗಾದ್ರೆ ಅಂತಹ ರಾಷ್ಟ್ರಗಳು ಯಾವಿರಬಹುದು. ಇನ್ನೂ ನಿಮ್ಮಲ್ಲಿ ಈಗಾಗಲೇ ಅನೇಕ ಗೆಸಸ್ ಕೂಡ ಹುಟ್ಟಿರಬಹುದು. ಅಮೆರಿಕಾ ಅನ್ನೋದು ತಲೆಗೆ ಬಂದಿರಬಹುದು . ಅದಕ್ಕೆ ಕಾರಣ ವಿಶ್ವದ ಹಲವೆಡೆಯಿಂದ ಜನ ಅಮೆರಿಕಾಗೆ ಹೋಗಿ ಕೆಲಸ ಮಾಡುವುದು. ಅಲ್ಲಿನ ಇನ್ ಕಮ್ ಬಾರತೀಯ ರೂಪಾಯಿಗೆ ಕಂಪೇರ್ ಮಾಡಿದ್ರೆ 10 ಪಟ್ಟು ಹೆಚ್ಚು ಅದ್ರಲ್ಲಿ ನೋ ಡೌಟ್. ಆದ್ರೆ ಇದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ಸ್ಯಾಲರಿ ಕೊಡುವ ರಾಷ್ಟ್ರಗಳು ಇವೆ. ಅವುಗಳ ವಿಸೇಷತೆಗಳು. ಯಾವು ಆ ರಾಷ್ಟ್ರಗಳು ಇಲ್ಲಿದೆ ಮಾಹಿತಿ.
ಲಕ್ಸಂಬರ್ಗ್ – ಪಶ್ಚಿಮ ಯೂರೋಪ್ ನಲ್ಲಿರುವ ಇದೊಂದು ಚಿಕ್ಕ ದೇಶ. ಆದ್ರೆ ಚಿಕ್ಕ ದೇಶ ಆದ್ರೂ ಕೂಡ ಈ ದೆಶದ ಆರ್ಥಿಕಥೆ ಅತ್ಯಂತ ಎಕ್ಸ್ಟ್ರೀಮ್ ಲೆವೆಲ್ ನಲ್ಲಿದೆ. ಎಸ್ ಇದೇ ಕಾರನಕ್ಕಾಗಿಯೇ ಈ ದೆಶ ಆರ್ಥಿಕಥೆಯಲ್ಲಿ ಇಡೀ ವಿಶ್ವಕ್ಕಿಂತ ಎಷ್ಟೋ ಪಟ್ಟು ಮುಂದುವರೆದಿದೆ. ಈ ದೇಶದಲ್ಲಿ ಅಧಿಕವಾಗಿ ಲಕ್ಸಂಬರ್ಗಿ , ಗರ್ಮನ್ ಹಾಗೂ ಫ್ರೆಂಚ್ ಬಾಷೆಯನ್ನ ಮಾತನಾಡಲಾಗುತ್ತೆ. ಮತ್ತೊಂದು ವಿಚಾರ. ಇಲ್ಲಿ ಜನರು ಕೂಲಿ ಮಾಡೋರು, ಕೂಲಿ ಕಾರ್ಮಿಕರು ಕಾಣಿಸಿಕೊಂಡ್ರೆ , ಅವರು ಈ ದೆಶದವರೇ ಅಲ್ಲ ಎಂದರ್ಥ. ಎಸ್ ಈ ದೆಶಕ್ಕೆ ಕೂಲಿ ಕೆಲಸಕ್ಕಾಗಿ ಬೇರೆ ಬೇರೆ ದೆಶಗಳಿಂದ ಜನರು ಬರುತ್ತಾರೆ. ಆದ್ರೆ ಇಲ್ಲಿನ ಜನರು ಹೆಚ್ಚಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೃಷಿಗೆ ಅಧಿಕ ಮಹತ್ವ ನೀಡ್ತಾರೆ ಅನ್ಬೋದು ಗಮನಾರ್ಹ ವಿಚಾರವಾಗಿದೆ. ಎಸ್ ಇಷ್ಟು ಮುಂದುವರೆದ ರಾಷ್ಟ್ರದಲ್ಲಿ ಕೃಷಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಮದ್ರೆ ಆಶ್ಚರ್ಯ ಆಗುತ್ತೆ. ಈ ದೇಶದ ಕೃಷಿಯ ಟೆಕ್ನಾಲಜಿ ಸಹ ಅತ್ಯಂತ ಹೈಟೆಕ್ ಹಾಗೂ ವೈಜ್ಞಾನಿಕವಾಗಿ ಸಿಕ್ಕಾಪಟ್ಟೆ ಅಭಿವೃದ್ಧಿ ಹೊಂದಿದ ಕರಷಿ ಟೆಕ್ನಾಲಜಿಯನ್ನ ಇಲ್ಲಿನ ಜನರು ಅಳವಡಿಸಿಕೊಮಡಿದ್ದಾರೆ. ಈ ದೆಶದಲಿ ಹೆಚ್ಚ್ಲು ಸ್ಯಾಲರಿಯ ಜೊತೆ ಜೊತೆಗೆ ಬೋನಸ್, ಹಾಗೂ ವಿವಿಧ ರೀತಿಯ ಅಲೋವೆನ್ಸಸ್ ಗಳನ್ನ ನೀಡಲಾಗುತ್ತೆ. ಇದರಿಂದಾಗಿ ವರ್ಕರ್ಸ್ ಯಾವಾಗ್ಲೂ ತಮ್ಮ ಕೆಲಸದ ಮೇಲೆ ಆಸಕ್ತಿ ಹೆಚ್ಚಿಸಿಕೊಳ್ತಾರೆ ಎನ್ನುವುದು ಒಂದು ಉದ್ದೇಶವೂ ಆಗಿದೆ.
ಮತ್ತೊಮದು ಆಶ್ಚರ್ಯವಾದ್ರೂ ನಂಬ್ಲೇಬೇಕಾದ ಸತ್ಯ ಹಾಗೂ ಇಂಟ್ರೆಸ್ಟಿಂಗ್ ಫ್ಯಾಕ್ಟ್ ಅಂದ್ರೆ ಈ ದೆಶದಲ್ಲಿ ಕೇವಲ 1300 ಪೊಲೀಸರು ಮಾತ್ರವೇ ಇದ್ದಾರೆ. ಅಷ್ಟೇ ಅಲ್ಲ ಕೇವಲ 2 ಪೊಲೀಸ್ ಸ್ಟೇಷನ್ ಗಳಿವೆ. ಎಸ್ ಇದ್ರಿಂದಲೇ ನೀವು ಊಹೆ ಮಾಡಿಕೊಳ್ಬಹುದು ಇಲ್ಲಿನ ಕ್ರೈಂ ರೇಟ್ ಎಷ್ಟು ಕಡಿಮೆ ಇರಬಹುದು ಅಂತ. ಇನ್ನೂ ಈ ಟಾಪಿಕ್ ನ ಬಹುಮುಖ್ಯವಾದ ವಿಚಾರ ಅಂದ್ರೆ ಈ ದೆಶದ ಜನರ ಸ್ಯಾಲರಿ ಬಗ್ಗೆ ಮಾತನಾಡೋದಾದ್ರೆ, ಇಲ್ಲಿನ ಜನರ ವರ್ಷದ ಇನ್ ಕಮ್ 44 ಲಕ್ಷದ 55 ಸಾವಿರದ 141 ರುಪಾಯಿ. ಎಸ್ ಇದು ಕನಿಷ್ಠ. ಇನ್ನೂ ಇದಕ್ಕಿಂತ ಹೆಚ್ಚು ಸ್ಯಾಲರಿ ಈ ದೇಶದಲ್ಲಿ ಸಿಗುತ್ತೆ.
ನೆದರ್ ಲ್ಯಾಂಡ್ – ನೆದರ್ ಲ್ಯಾಂಡ್ ನ ಹಾಲೆಂಡ್ ಎಂದೂ ಕರೆಯುತ್ತಾರೆ. ಈ ದೇಶದಲ್ಲಿ ಆರೋಗ್ಯ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಕಾರ್ಮಿಕ ನೀತಿ , ಸೌಲಭ್ಯ, ಸೇವೆಗಳು ಬೇರೆ ದೇಶಗಳಿಂತಲೂ ಅತ್ಯಂತ ಉತ್ತಮವಾಗಿದೆ ಎಂದು 2019 ರಲ್ಲಿ ವರ್ಲ್ಡ್ ಯುನೈಟೆಡ್ ನೇಶನ್ಸ್ ಹ್ಯಾಪಿನೆಸ್ ರಿಪೋರ್ಟ್ ವರದಿ ಮಾಡಲಾಗಿದೆ. ಇದೊಂದು ಸಮೃದ್ಧ ರಾಷ್ಟ್ರವೂ ಹೌದು. ಇನ್ನೂ ಈ ದೇಶದಲ್ಲಿ ಗಮನಿಬೇಕಾದ ವಚಿಚಾರ ಅಂದ್ರೆ ಬ್ಯುಸಿನೆಸ್ ಇನ್ ಪ್ರಾಸ್ಟ್ರಕ್ಚರ್, ಬ್ಯುಸಿನೆಸ್ ತಂತ್ರಗಾರಿಕೆ. ಯಾಕಂದ್ರೆ ಇಲ್ಲಿ ವ್ಯವಹಾರದಲ್ಲಿ ಯಾವುದೇ ಟಾಕ್ಸ್ ಕಟ್ಟಬೇಕಾದ ಅವಶ್ಯಕತೆಯಿಲ್ಲ. ಆ ರೀತಿಯಾದ ವ್ಯವಸ್ಥೆಯನ್ನ ಈ ದೇಶ ಹೊಂದಿದೆ. ಈ ದೇಶ ಸಮುದ್ರದ ತಟದಲ್ಲಿ ಇರುವ ಪರಿನಾಮ, ಈ ದೇಶದಲ್ಲಿ ಸಮುದ್ರದ ದಡದಲ್ಲಿ 1400 ಕಿಮಿ ಉದ್ದದ ಗೋಡೆಯನ್ನ ನಿರ್ಮಾಣ ಮಾಡಿದೆ. ಸಮುದ್ರದ ನೀರು ದೇಶದ ಒಳಗೆ ಬಾರದಂತೆ ತಡೆಯುವ ಉದ್ದೆಶದಿಂದ ಈ ಗೊಡೆಯನ್ನ ನಿರ್ಮಾಣ ಮಾಡಲಾಗಿದೆ. ಅಪ್ಪಿ ತಪ್ಪಿ ಈ ಗೋಡೆಯನ್ನ ತೆರವುಗೊಳಿಸಿದ್ರೆ ಶೇ 40 ರಷ್ಟು ನೆದರ್ಲ್ಯಾಂಡ್ ಜಲಸಮಾಧಿಯಾಗೋದ್ರಲ್ಲಿ ನೋ ಡೌಟ್. ಇನ್ನೂ ಮತ್ತೊಂದು ವಿಚಾರ ಅಂದ್ರೆ ಇಲ್ಲಿನ ಕ್ರೈಂ ರೇಟ್ ತುಂಬಾ ಅಂದ್ರೆ ತುಂಬಾನೆ ಕಡಿಮೆ. ಇದೇ ಕಾರಣಕ್ಕೆ ಇಲ್ಲಿ 8 ಜೈಲುಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಯಾಕಾಂದ್ರೆ ಇಲ್ಲಿ ಅಪರಾಧಗಳು, ಅಪರಾಧಿಗಳ ಸಂಖ್ಯೆ ತುಂಬಾನೆ ಕಡಿಮೆ. ಇದಕ್ಕೆ ಮತ್ತೊಂದು ಕಾರಣ ಇಲ್ಲಿನ ಲಿಟ್ರೆಯೂ ಆಗಿರಬಹುದು. ಇನ್ನೂ ಇದೊಂದು ಮುಂದುವರೆದ ರಾಷ್ಟ್ರವಾಗಿರೋದ್ರಿಂದ ಇಲ್ಲಿನ ಜನರ ಜೀವನ ಶೈಲಿ ಬದುಕುವ ರೀತಿ, ಭಾರತ ಹಾಗೂ ಇತರೇ ರಾಷ್ಟ್ರಗಳಿಗೆ ಹೋಲಿಸಿದ್ರೆ ತುಂಬಾನೆ ಉತ್ತಮವಾಗಿದೆ. ಇನ್ನೂ ಇಲ್ಲಿನ ಜನರ ಆವರೇಜ್ ಸ್ಯಾಲರಿ ಬಗ್ಗೆ ಮಾತನಾಡೋದಾದ್ರೆ ಇಲ್ಲಿನ ಜನರ ವಾರ್ಷಿಕ ಕನಿಷ್ಠ ವೇತನ 50 ಸಾವಿರದ 670 ಡಾಲರ್ ( 50,670 ಡಾಲರ್ ) ಅಂದ್ರೆ ಭಾರತದ ರೂಪಾಯಿಯಲ್ಲಿ ಬರೋಬ್ಬರಿ 37 ಲಕ್ಷದ 39 ಸಾವಿರದ 372 ರೂಪಾಯಿಗಳು ( 37,39,372 ರೂ.).
ಡೆನ್ಮಾರ್ಕ್ – ಉತ್ತರ ಯುರೋಪ್ ನಲ್ಲಿರುವ ಡೆನಾರ್ಮ್ ಆಧುನಿಕವಾಗಿಯೂ ಶೈಕ್ಷಿಣಿಕ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಂತ ಮುಂದುವರೆದ ರಾಷ್ಟ್ರ, ಸಂಪನ್ನ ರಾಷ್ಟ್ರವೂ ಹೌದು. ಈ ದೇಶದ ಜನ ಸಖತ್ ಡಿಸಿಪ್ಲೈನೆಡ್ ವೆಲ್ ಎಜುಕೇಟೆಡ್, ಶಿಸ್ತಿನ ಸಿಫಾಯಿಗಳು ಅಂತಾರಲ್ಲ ಹಾಗೆ. ಅಂದ್ರೆ ಈ ದೆಶದ ಜನರು ಚಾಚೂ ತಪ್ಪದೆ ಪ್ರತಿಯೊಂದು ನಿಯಮವನ್ನ ಸ್ಟ್ರಿಕ್ಟ್ ಆಗಿ ಪಾಲನೆ ಮಾಡ್ತಾರೆ. ಅಷ್ಟೇ ಅಲ್ಲ ಈ ನಿಯಮಗಳು ನಮ್ಮ ಒಳ್ಳೆಯದಕ್ಕೆ , ನಮ್ಮ ಲೈಫ್ ಸ್ಟೈಲ್ ಗೆ ಅನುಕೂಲಕರ ಅನ್ನೋನದನ್ನ ಇಲ್ಲಿನ ಜನರು ನಂಬಿದ್ದಾರೆ ಕೂಡ. ಆದ್ರೆ ಇಷ್ಟು ಮುಂದುವರೆದ ರಾಷ್ಟ್ರದಲ್ಲಿ ಒಂದು ವಿಚಿತ್ರ ಮೂಡನಂಬಿಕೆಯಾದ್ರೂ ಅನ್ನಬಹುದು ಪರಂಪರೆಯಾದ್ರೂ ಅನ್ನಬಹುದು. ಆದ್ರೆ ಇದನ್ನ ಇಲ್ಲಿನ ಜನ ಇವತ್ತಿಗೂ ಫಾಲೋ ªಮಾಡ್ತಾರೆ. ಅದೇನೆಂದ್ರೆ ಇಲ್ಲಿನ ಜನರಿಗೆ 25 ವರ್ಷದ ಒಳಗೆ ಮದುವೆಯಾಗದೇ ಇದ್ದಲ್ಲಿ, ಅವರ ಮೇಲೆ ದಾಲ್ ಚೀನಿ ಎಸೆಯಲಾಗುತ್ತೆ. 30 ವರ್ಷದ ಒಳಗೆ ನಿಮ್ಮ ಮದುವೆಯಾಗದೇ ಹೋದ್ರೆ ಅಂತಹವರ ಮೇಲೆ ಕಪ್ಪು ಮೆಣಸಿನ ಪುಡಿಯನ್ನ ಎರೆಚಲಾಗುತ್ತೆ. ಕೇಳೋದಕ್ಕೆ ವಿಚಿತ್ರ ಅನ್ಸುದ್ರು ಅಲ್ಲಿನ ಜನ ಈ ನಿಯಮವನ್ನ ಇವತ್ತಿಗೂ ಸಹ ಫಾಲೋ ಮಾಡ್ತಾರೆ. ಈ ದೇಶ ಆರ್ಥಿವಾಗಿ ಅತ್ಯಂತ ಸದೃಢ ದೇಶ. ಒಂದರ್ಥದಲ್ಲಿ ಈ ದೆಶದಲ್ಲಿ ದುಡ್ಡಿಗೆ ಯಾವುದೇ ಕೊರತೆಯಿಲ್ಲ. ಆದ್ರೂ ಇವತ್ತಿಗೂ ಈ ದೆಶದ ಜನರು ಕಾರು ಬೈಕ್ ಅಷ್ಟೇ ಯಾಕೆ ಪಬ್ಲಿಕ್ ಟ್ರಾನ್ಸ್ ಪೋರ್ಟೆನ್ ಗಿಂತ ಹೆಚ್ಚು ಸೈಕಲ್ ಗಳಲ್ಲಿ ಟ್ರಾವೆಲ್ ಮಾಡೋದನ್ನ ಅತಿ ಹೆಚ್ಚು ಇಷ್ಟ ಪಡ್ತಾರೆ. ಇದು ಪರಿಸರ ಸ್ನೇಹಿ ಜೊತೆಗೆ , ಟ್ರಾಫಿಕ್ ಜಂಜಾಟವನ್ನು ನಿವಾರಿಸುತ್ತೆ. ಜೊತೆಜೊತೆಗೆ ಫಿಟ್ ನೆಸ್ ಕೂಡ ಕಾಪಾಡಿಕೊಳ್ಳಬಹುದು. ಇನ್ನೂ ಇಲ್ಲಿನ ವಾರ್ಷಿಕ ಸ್ಯಾಲರಿ ಬಗ್ಗೆ ಮಾತನಾಡೋದಾದ್ರೆ ಇಲ್ಲಿನ ಜನರ ಕನಿಷ್ಠ ವಾರ್ಷಿಕ ವೇತನ 50,167 ಡಾಲರ್ ಅಂಂದ್ರೆ ಭಾರತದ ರೂಪಾಯಿ ಮೌಲ್ಯದ ಅನುಸಾರ 37,02,2251 ರೂಪಾಯಿಗಳು ( 37 ಲಕ್ಷದ 2 ಸಾವಿರದ 251 ರೂಪಾಯಿ)
ನಾರ್ವೇ – ಈ ದೇಶ ಆರ್ಥಿಕವಾಗಿ , ತಂತ್ರಜ್ಞಾನ, ಮುಂದುವರೆದ ರಾಷ್ಟ್ರವೂ ಹೌದು. ಜೊತೆಜೊತೆಗೆ ಇಲ್ಲಿನ ಕ್ರೈಂ ರೇಟ್ಸ್ ಬಗ್ಗೆ ತಿಳಿಯೊದಾದ್ರೆ ಇಲ್ಲಿನ ಕ್ರೈಂ ರೇಟ್ಸ್ ತುಂಬಾನೆ ಕಡಿಮೆಯಿದೆ. ಇನ್ನೂ ವಿಸೇಷ ಅಂದ್ರೆ ಇಲ್ಲಿನ ಜನರು ಅತಿ ಹೆಚ್ಚು ಪುಸ್ತಕಗಳನ್ನ ಓದುವುದನ್ನ ಇಷ್ಟಪಡ್ತಾರೆ. ಅಷ್ಟೇ ಅಲ್ಲ ಯಾರಾದ್ರೂ ಪುಸ್ತಕ ಬರೆದ್ರೆ ಇಲ್ಲಿನ ಸರ್ಕಾರವೇ ಆ ಪುಸ್ತಕದ ಸಾವಿರಾರು ಕಾಪಿಗಳನ್ನ ಖರೀದಿಸುತ್ತದೆ. ಬಳಿಕ ಅನ್ನ ಲೈಬ್ರರಿಯಲ್ಲಿ ಇಡಿಸುತ್ತೆ. ಇದೇ ಕಾರಣಕ್ಕೆ ಈ ದೆಶದಲ್ಲಿ ಪ್ರತಿ ವರ್ಷ 2000ಕ್ಕೂ ಅಧಿಕ ಪುಸ್ತಕಗಳು ಪಬ್ಲಿಶ್ ಆಗುತ್ತೆ. ಇನ್ನೂ ಮತ್ತೊಂದು ಗಮನಾರ್ಹ ವಿಚಾರ ಎಂದ್ರೆ ಈ ದೇಶದಲ್ಲಿ ಯಾವುದೇ ಕಂಪನಿ 12 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳನ್ನ ಬಳಸಿ ಆಡ್ ಶೂಟ್ ಮಾಡುವುದು ಶಿಕ್ಷಾರ್ಹ ಅಪರಾಧ ಹಾಗೆ ಮಾಡಿದ್ದು ಕಂಡು ಬಂದ್ರೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇನ್ನೂ ಇಲ್ಲಿನ ಜನರ ಆವರೇಜ್ ಸ್ಯಾಲರಿ ಬಗ್ಗೆ ಮಾತನಾಡೋದಾದ್ರೆ ಇಲ್ಲಿನ ಜನರ ಕನಿಷ್ಠ ವಾರ್ಷಿಕ ವೇತನ 36 ಲಕ್ಷದ 50 ಸಾವಿರಕ್ಕೂ ಅಧಿಕವಿದೆ.
ಐಸ್ ಲ್ಯಾಂಡ್ – ಇಡೀ ಯೂರೋಪ್ ನ ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ರಾಷ್ಟ್ರ ಯೂರೋಪ್. ಅಭಿವೃದ್ಧಿ ವಿಚಾರದಲ್ಲಿ ಮುಂದುವರೆದಿದೆ. ಇನ್ನೂ ವಿಶ್ವದ ಅತ್ಯಂತ ಅಭಿವೃದ್ಧಿ ರಾಷ್ಟ್ರಗಳ ಬಗ್ಗೆ ಮಾತನಾಡಿದ್ರೆ ಈ ದೆಶವೂ ಪಾ ಲಿಸ್ಟ್ ನಲ್ಲಿ 9 ನೇ ಸ್ಥಾನದಲ್ಲಿ ಬರುತ್ತೆ. ಇಲ್ಲಿನ ಸ್ಯಾಲರಿ ಬಗ್ಗೆ ನಾವು ಮಾತನಾಡೋದಾದ್ರೆ ಇಲ್ಲಿನ ವಾರ್ಷಿಕ ಕನಿಷ್ಠ ಸ್ಯಾಲರಿ 40 ಸಾವಿರ ಡಾಲರ್ ಅಧಿಕವಿದೆ. ಅಂದ್ರೆ ಭಾರತೀಯ ರಪಾಯಿಗಳಲ್ಲಿ ಸುಮಾರು 34 ಲಕ್ಷಕ್ಕಿಂತ ಹೆಚ್ಚು.
ಕೆನಡಾ – ಅಭಿವೃದ್ಧಿ ಹೊಂದಿದ ರಾಷ್ಟ್ರ. ಈ ದೇಶದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಹೀಗಾಗಿಯೇ ಈ ದೇಶದ ಜನರ ಸ್ಟಾಂಡರ್ಡ್ ಆಫ್ ಲಿವಿಂಗ್ ಹೈ ಲೆವೆಲ್ ಅಲ್ಲಿದೆ. ಇನ್ನೂ ಇಲ್ಲಿನ ಜನರ ಕನಿಷ್ಠ ವಾರ್ಷಿಕ ವೇತನದ ಬಗ್ಗೆ ಮಾತನಾಡೋದಾದ್ರೆ ಸುಮಾರು 46 ಸಾವಿರ ಡಾಲರ್ ಗಿಂತಲೂ ಅಧಿಕವಿದೆ. ಅಂದ್ರೆ 34 ಲಕ್ಷ ರೂಪಾಯಿಗಿಂತ ಹೆಚ್ಚು
ಬೆಲ್ಜಿಯಮ್ : ಇಲ್ಲಿನ ಜನರ ಲಯಫ್ ಸ್ಟೈಲ್ ತುಂಬಾನೇ ಸ್ಟಾಂಡರ್ಡ್ ಆಗಿದ್ದು, ಲಿಟ್ರೆಸಿ ರೇಟ್ ಕೂ ತುಂಬಾನೆ ಉತ್ತಮವಾಗಿದೆ. ಅಭಿವೃದ್ಧಿ ಹೊಂದಿ ರಾಷ್ಟ್ರಗಳ ಪಟ್ಟಿಯಲ್ಲೂ ಅಗ್ರಸ್ಥಾನದಲ್ಲಿದೆ. ಅಲ್ದೇ ಈ ದೇಶವನ್ನ ಜಗತ್ತಿನ ಅತ್ಯಂತ ಶಾಂತಿಯುತ ರಾಷ್ಟ್ರವಾಗಿ ಗುರುತಿಸಲಾಗಿದೆ. ಈ ದೇಶದಲ್ಲಿ ಡಚ್ ಹಾಗೂ ಫ್ರೆಂಚ್ ಭಾಷೆಯನ್ನ ಹೆಚ್ಚಾಗಿ ಮಾತನಾಡಲಾಗುತ್ತೆ. ಇನ್ನೂ ಈ ದೇಶದ ಸ್ಯಾಲಿರಿ ಬಗ್ಗೆ ಮಾತನಾಡೋದಾದ್ರೆ ಇಲ್ಲಿನ ವಾರ್ಷಿಕ ಕನಿಷ್ಠ ವೇತನ 37 ಲಕ್ಷ ರೂಪಾಯಿಗಿಂತಲೂ ಹೆಚ್ಚಿದೆ.
ಆಸ್ಟ್ರೇಲಿಯಾ – ಸಮುದ್ರಗಳ ದೆಶ ಅಂತಲೂ ಕರೆದಿಕೊಳ್ಳುವ ಈ ರಾಷ್ರದಲ್ಲಿ ಇರೋ ಬೀಚ್ ಗಳನ್ನ ಸುತ್ತಾಡೋಕೆ ಒಂದು ವರ್ಷ ಟೈಮ್ ಇದ್ರೂ ಸಾಲಲ್ಲ. ಅಷ್ಟು ಬೀಚಸ್ ಇವೆ. ಒಂದು ವರ್ಷ ಅಲ್ಲ ಸುಮಾರು ವರ್ಷಗಳೇ ಬೇಕಾಗಬಹುದುದು. ಆಸ್ಟರೇಲಿಯಾ ಅಂದ ತಕ್ಷಣ ಗ್ರೇಟ್ ಬ್ಯಾರಿಯರ್ ಲೀಫ್ ನ ನಾವು ಮರೆಯೋ ಹಾಗಿಲ್ಲಾ ಅಲ್ವಾ. ಈ ಸಮುದ್ರದ ನೀರು ಎಷ್ಟು ಶುದ್ಧವಾಗಿರುತ್ತೆ ಅಂದ್ರೆ ನೀರಿನೊಳಗೆ ಟ್ರಾನ್ಸ್ ಫರೆಂಟ್ ಆಗಿ ಎಲ್ಲವೂ ಕ್ರಿಸ್ಟಲ್ ಕ್ಲಿಯರ್ ಆಗಿ ಕಾಣಿಸುತ್ತೆ. ಪ್ರಮುಖ ಆರ್ಥಿಕಥೆಯ ಮೂಲ ಟ್ಯೂರಿಸಮ್. ಇಲ್ಲಿನ ಜನರ ಕನಿಷ್ಠ ವಾರ್ಷಿಕ ವಚೇತನ 50 ಸಾವಿರ ಡಾಲರ್ ಗೂ ಹೆಚ್ಚಿರುತ್ತೆ. ಅಂದ್ರೆ ಸುಮಾರು 38 ಲಕ್ಷಕ್ಕೂ ಅಧಿಕ.