ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶ ಈ ಪರಿಸ್ಥಿತಿಯಲ್ಲಿದೆ : ಸಿದ್ದರಾಮಯ್ಯ…

admin by admin
March 26, 2020
in International, Newsbeat, Samagra karnataka
Share on FacebookShare on TwitterShare on WhatsappShare on Telegram

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮ್ ಘೋಷಣೆ ಮಾಡಿದ ಪ್ಯಾಕೇಜ್ ಅನ್ನು
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಪತ್ರಿಕಾ ಪ್ರಕಟಣೆ ಮಾಡಿರುವ ಅವರು, ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ದೇಶಕ್ಕೆ ಈ ಪರಿಸ್ಥಿತಿ ಬಂದಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಕೊರೊನಾ ಸೋಂಕಿನ‌ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ.ಈ ಪ್ಯಾಕೇಜ್ Too little Too Late ಎನ್ನುವ ಹಾಗಾಗಿದೆ.ದೇಶದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ಪತ್ತೆಯಾದುದು ಜನವರಿ 30 ರಂದು ಕೊರೊನಾದಿಂದ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ರಾಹುಲ್ ಗಾಂಧಿಯವರು ಫೆಬ್ರವರಿ 12 ರಂದು ಎಚ್ಚರಿಸಿದ್ದರು. ಹೀಗಿದ್ದರೂ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಾ ಬಂದಿರುವುದೇ ಈಗಿನ ಸ್ಥಿತಿಗೆ ಕಾರಣ.ಈಗಾಗಲೇ ವಿಳಂಬವಾಗಿರುವುದರಿಂದ ಸರ್ಕಾರ ಪ್ರಕಟಿಸಿರುವ ಈ ಯೋಜನೆಗಳು ತಕ್ಷಣದಿಂದ ಜಾರಿಗೆ ತರಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸುತ್ತೇನೆ. ಬಹಳ ಮುಖ್ಯವಾಗಿ ಸಣ್ಣ ವ್ಯಾಪಾರಿಗಳು, ಅಟೋ, ಟ್ಯಾಕ್ಸಿ ಚಾಲಕರು ವಾಹನಗಳ ಖರೀದಿಸಲು ಬ್ಯಾಂಕುಗಳಿಂದ ಸಾಲ‌ಪಡೆದಿದ್ದಾರೆ. ಬಂದ್ ಹಿನ್ನೆಲೆಯಲ್ಲಿ ಅವರಿಗೆ ಉದ್ಯೋಗ ಇಲ್ಲ. ಅವರ ಸಾಲವನ್ನು ಭಾಗಶಃ ಮನ್ನಾ ಮಾಡಿ ಕನಿಷ್ಠ ಮೂರು ತಿಂಗಳ ಇಎಮ್‌ಐ ಪಾವತಿಯನ್ನು ಮುಂದೂಡಬೇಕು.
ಅಸಂಘಟಿತ ವಲಯದಲ್ಲಿರುವ ಕಾರ್ಮಿಕರ ಬದುಕು ಕಷ್ಟದಲ್ಲಿದೆ. ಕಾರ್ಮಿಕ ಇಲಾಖೆ ತುರ್ತಾಗಿ ಗಮನ ನೀಡಬೇಕು. ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕರು ಮತ್ತು ಸಿಬ್ಬಂದಿ‌ ಹಾಗೂ ಬಂದ್ ಆಗಿರುವ ಹೊಟೇಲ್,ಮಾಲ್, ಚಿತ್ರಮಂದಿರಗಳ ಸಿಬ್ಬಂದಿ, ಡೆಲಿವರಿ ಬಾಯ್‌ಗಳು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಗಾರ್ಮೆಂಟ್ ಫ್ಯಾಕ್ಟರಿಗಳೂ ಸೇರಿದಂತೆ ಸಣ್ಣ ಕೈಗಾರಿಕೆಗಳು ಮುಚ್ಚಿವ ಇವರೆಲ್ಲರ ಉದ್ಯೋಗದಾತರು ಸಂಬಳ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ನಿಗಾ ವಹಿಸಬೇಕು.

ಮಹಿಳೆಯರ ಜನಧನ ಖಾತೆಗೆ ಮಾತ್ರ ತಲಾ 500 ರೂ.ಗಳ ಕಂತುಗಳಲ್ಲಿ ಒಂದು 1.500 ರೂಪಾಯಿ ಜಮೆ ಮಾಡಿರುವುದಾಗಿ ಕೇಂದ್ರ ಹಣಕಾಸು ಸಚಿವರು ಹೇಳಿದ್ದಾರೆ. ಈ ಸೌಲಭ್ಯವನ್ನು ಪುರುಷರಿಗೂ ವಿಸ್ತರಿಸಬೇಕು ಮತ್ತು ನೆರವಿನ ಮೊತ್ತವನ್ನು ಕನಿಷ್ಠ 3000 ರೂ.ಗಳಿಗೆ ಹೆಚ್ಚಿಸಬೇಕು. ಕಿಸಾನ್ ಸಮ್ಮಾನ್ ಯೋಜನೆಯ ಹಣವನ್ನು ಹೆಚ್ಚಿಸಬೇಕೆಂದು ಪ್ರಾರಂಭದಿಂದಲೂ ಹೇಳುತ್ತಾ ಬಂದಿದ್ದೆ. ಹಣಕಾಸು ಸಚಿವರು ಒಟ್ಟು ವಾರ್ಷಿಕ ಆರು ಸಾವಿರ ರೂಪಾಯಿಗಳಲ್ಲಿ ಎರಡು ಸಾವಿರ ರೂಪಾಯಿಯ ಒಂದು ಕಂತನ್ನು ಮುಂಗಡವಾಗಿ ಪಾವತಿಸುವುದಾಗಿ ನಿರ್ಮಲಾ‌ ಸೀತಾರಾಮನ್ ಹೇಳಿದ್ದಾರೆ. ಇದು ಏನೇನೂ ಸಾಲದು. ಒಟ್ಟು ಮೊತ್ತವನ್ನು ಈಗಿನ ಆರು ಸಾವಿರ ರೂಪಾಯಿಗಳಿಂದ ಹನ್ನೆರಡು ಸಾವಿರ ರೂಪಾಯಿಗಳಿಗೆ ಏರಿಸಬೇಕು.ಆಹಾರ ಮತ್ತಿತರ ಅವಶ್ಯಕ ಸಾಮಗ್ರಿಗಳ ಮೇಲಿನ ಜಿ.ಎಸ್.ಟಿ.ಯನ್ನು ಮುಂದಿನ ಮೂರು ತಿಂಗಳ ಕಾಲ‌ ಕನಿಷ್ಢ ಶೇಕಡಾ ಐದರಷ್ಟು ಕಡಿತಗೊಳಿಸಬೇಕು.ಬಹಳ ಸಂಖ್ಯೆಯಲ್ಲಿ ಲಾಕ್ ಡೌನ್ ಗಿಂತ ಮೊದಲು ಊರಿಗೆ ಹೋಗಲಾಗದೆ ಅನಿವಾರ್ಯವಾಗಿ ಬೆಂಗಳೂರು ನಗರ ಮತ್ತು ಜಿಲ್ಲಾ‌ಕೇಂದ್ರಗಳಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗಾಗಿ ಆಶ್ರಯತಾಣಗಳನ್ನು ನಿರ್ಮಿಸಿ ಊಟ-ತಿಂಡಿಗೆ ವ್ಯವಸ್ಥೆ ಮಾಡಬೇಕು. ಬಡವರಿಗೆ ನೆರವಾಗಲು ಯೋಜನೆಗಳನ್ನು ಘೋಷಿಸಿರುದ ಜೊತೆಯಲ್ಲಿ ಕೊರೊನಾ ಸೋಂಕು ಪೀಡಿತರ ಚಿಕಿತ್ಸೆಗಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಕೇಂದ್ರ ಸರ್ಕಾರ ಹೇಳಬೇಕಾಗಿತ್ತು.ನಮ್ಮ ರಾಜ್ಯದ ಬೆಂಗಳೂರು,ಮೈಸೂರು,ಹಾಸನ ಮತ್ತು ಶಿವಮೊಗ್ಗದಲ್ಲಿ ಮಾತ್ರ ಕರೋನಾ ವೈರಸ್ ಪತ್ತೆ ಹಚ್ಚುವ ಐದು ಪರೀಕ್ಷಾ ಲ್ಯಾಬ್‌ಗಳಿವೆ. ಬಳ್ಳಾರಿ ಮತ್ತು ಕಲ್ಬುರ್ಗಿಗಳಲ್ಲಿ ಮಾತ್ರ ಕಫದ ಮಾದರಿ‌ ಸಂಗ್ರಹಿಸುವ ಕೇಂದ್ರಗಳಿವೆ. ಇಷ್ಟು ಮಾತ್ರ ಸಾಕೇ? ಪರಿಸ್ಥಿತಿ ಉಲ್ಭಣಿಸಿದರೆ ಏನು ಸಿದ್ಧತೆ ಇದೆ. ತಕ್ಷಣ 2-3 ಜಿಲ್ಲೆಗಳಿಗೊಂದರಂತೆಯಾದರೂ ಮುಖ್ಯವಾಗಿ,ಉತ್ತರ ಕರ್ನಾಟಕದಲ್ಲಿ ಕರೋನಾ ವೈರಸ್ ಪರೀಕ್ಷಾ ಲ್ಯಾಬ್ ಗಳನ್ನು ಪ್ರಾರಂಭಿಸಬೇಕು.
15 ಟೆಸ್ಟಿಂಗ್ ಕಿಟ್‌ಗಳ ಕೊರತೆಯಿಂದಾಗಿ ಸೋಂಕಿತರ ಸಂಖ್ಯೆ ನಿಖರವಾಗಿ ತಿಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿಬಸಾಕಷ್ಟು ಪ್ರಮಾಣದಲ್ಲಿ ಟೆಸ್ಸಿಂಗ್ ಕಿಟ್‌ಗಳನ್ನು ಆಸ್ಪತ್ರೆಗಳಿಗೆ ಒದಗಿಸಬೇಕು.
ಎಲ್ಲ ಜಿಲ್ಲೆಗಳಲ್ಲಿ ಕಫದ ಮಾದರಿ‌ ಸಂಗ್ರಹ ಕೇಂದ್ರಗಳನ್ನು ತೆರೆಯಬೇಕು. ಐಸೋಲೇಷನ್ ಕೇಂದ್ರಗಳು ಮತ್ತು ಕೃತಕ ಉಸಿರಾಟದ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಎಲ್ಲ ಕರೋನಾ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸುವುದು ಸಾಧ್ಯವಾಗಲಾರದು. ಜಿಲ್ಲೆಗಳಲ್ಲಿರುವ ಖಾಸಗಿ ಆಸ್ಪತ್ರೆಗಳನ್ನು ಕೂಡಾ ಬಳಸಿಕೊಳ್ಳಲು ಕ್ರಮಕೈಗೊಳ್ಳಬೇಕು. ಜಿಲ್ಲೆಗಳ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಬೇಕು. ರಾಜ್ಯ ಸರ್ಕಾರ ಕೊರೋನಾ ರೋಗ ನಿಯಂತ್ರಿಸಲು ರೂ.200 ಕೋಟಿ ಮೀಸಲಿಟ್ಟಿದೆ ಎಂದು ಹೇಳಿದೆ. ಇದರಲ್ಲಿ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಹಾಗೂ ಎಲ್ಲಾ ಜಿಲ್ಲಾ ಕೇಂದ್ರದ ಮುಖ್ಯ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಸೌಲಭ್ಯ ಈ ಕೂಡಲೇ ಕಲ್ಪಿಸಬೇಕು. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಬರ, ಪ್ರವಾಹ, ವ್ಯಾಪಾರ ವಹಿವಾಟು ಸ್ಥಗಿತದಿಂದ ಈಗಾಗಲೇ ಜನ ನೊಂದಿದ್ದಾರೆ, ಕೊರೋನಾ ಅವರ ಬದುಕು ಕಸಿಯದಿರಲಿ.
ಬಹುಪಾಲು ಜಿಲ್ಲೆಗಳಲ್ಲಿ ಕಂಟ್ರೋಲ್ ರೂಂಗಳನ್ನೆ ಇನ್ನೂ ಪ್ರಾರಂಭಿಸಿಲ್ಲ.ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನೀಡುವ ಪೌಷ್ಟಿಕ ಆಹಾರದ ಕುರಿತು ಇನ್ನೂ ತೀರ್ಮಾನವಾಗಿಲ್ಲ.ಜೀವನಾವಶ್ಯಕ ವಸ್ತುಗಳ ಮಾರಾಟ ಕುರಿತು ನೀಡಬೇಕಾದ ಪಾಸ್ ಗಳ ಕುರಿತು ಜಿಲ್ಲೆಗಳಲ್ಲಿ‌ ಸ್ಪಷ್ಟತೆ ಇಲ್ಲ.. ಬೆಂಗಳೂರಿನಲ್ಲೆ DCP ಕಛೇರಿಯಲ್ಲಿ ಪಾಸ್ ವಿತರಿಸುವ ವ್ಯವಸ್ಥೆ ಇದೆ .ಅಲ್ಲಿಯವರೆಗೆ ಬಡವ್ಯಾಪಾರಿಯೊಬ್ಬ ಹೋಗಲಾಗುವುದೆ?
ಕನಿಷ್ಟ ACP ಗೆ ಈ ಅಧಿಕಾರ ವರ್ಗಾಯಿಸಿ ಸರ್ಕಾರದ ಆದೇಶಕ್ಕಾಗಿ ಕಾಯದೆ ಸ್ವಯಂಪ್ರೇರಿತರಾಗಿ ಸ್ವಯಂದಿಗ್ಭಂಧನಕ್ಕೊಳಪಡಿಸಿಕೊಳ್ಳುವುದು ಇನ್ನು ಕೆಲವು ದಿನ‌ ಜನತೆಯ ದಿನಚರಿಯಾಗಲಿ. ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ ಕ್ರಮಗಳು ನಮ್ಮ ಜೀವನ ವಿಧಾನವಾಗಲಿ. ಕರೊನಾ ವೈರಸ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡೋಣ. ಬಂದ್, ಕರ್ಫ್ಯೂ, ಲಾಕ್‌ಡೌನ್‌ಗಳ ಜೊತೆಗೆ ಈ ಎಲ್ಲ ಆದೇಶಗಳನ್ನು ಸ್ವಯಂಪ್ರೇರಿತರಾಗಿ ಪಾಲಿಸುತ್ತಿರುವ ಜನತೆಯ ಕಡೆ ರಾಜ್ಯ ಸರ್ಕಾರ ಗಮನಕೊಡಬೇಕು. ವೈದ್ಯಕೀಯ ಕ್ಷೇತ್ರ ನಮ್ಮ ರಾಜ್ಯದ ದೊಡ್ಡ ಶಕ್ತಿ. ವೈದ್ಯಕೀಯ ಕಾಲೇಜುಗಳು, ನರ್ಸಿಂಗ್ ಮತ್ತಿತರ ಅರೆವೈದ್ಯಕೀಯ ತರಬೇತಿ ಕಾಲೇಜುಗಳು ನಮ್ಮಲ್ಲಿಯೇ ಹೆಚ್ಚು. ಈ ಕಾಲೇಜುಗಳ ಹಿರಿಯ ವಿದ್ಯಾರ್ಥಿಗಳನ್ನು ಕೊರೊನಾ ವಿರುದ್ದದ ಸಮರಕ್ಕೆ ಬಳಸಿಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಯೋಚನೆ ಮಾಡಬೇಕು. ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತಿಯಾಗಿರುವ‌ ಮತ್ತು ಆ ಇಲಾಖೆಯಲ್ಲಿ ಕೆಲಸ ಮಾಡಿ ಈಗ ಬೇರೆ ಇಲಾಖೆಗಳಲ್ಲಿರುವ ಅಧಿಕಾರಿಗಳ‌ ಅನುಭವವನ್ನು ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕು. ಪ್ರಕೃತಿ ಭಾರತದ ಪಾಲಿಗೆ ಕರುಣಾಮಯಿಯಾಗಿ, ಕರೋನಾ ಹೆಮ್ಮಾರಿಯನ್ನು ಎದುರಿಸಲು ಸಿದ್ಧತೆ ನಡೆಸಲಿಕ್ಕಾಗಿ ಸಮಯವಕಾಶ ನೀಡಿದೆ. ಈ ಸಮಯವನ್ನು ಮಾತುಗಳಲ್ಲಿಯೇ ವ್ಯರ್ಥಮಾಡದೆ ಸಮರೋಪಾದಿಯಲ್ಲಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಂದಾಗಬೇಕು. ಸಾಮಾನ್ಯ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೋನಾ ಸೋಂಕು ಎದುರಿಸಲು ಕೈಗೊಂಡಿರುವ ಕ್ರಮಗಳು ಮಾದರಿಯಾಗಿವೆ. ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಸಹ ಕೇರಳ ರಾಜ್ಯದ ಕ್ರಮಗಳನ್ನು‌ ಗಮನಕ್ಕೆ ತೆಗೆದುಕೊಳ್ಳಬೇಕು ಎಂದು ಸಿದ್ದರಾಮನ ಒತ್ತಾಯಿಸಿದ್ದಾರೆ

Related posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

March 22, 2026
ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

March 22, 2026
Tags: Nirmala SitharamanSiddaramaiah
ShareTweetSendShare
Join us on:

Related Posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

by Shwetha
March 22, 2026
0

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪವಿತ್ರ ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಈಗ ಭಾರಿ...

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

by Shwetha
March 22, 2026
0

ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾ ಘರ್ಷಣೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಜಿಎಫ್ 2 ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಶ್...

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

by Shwetha
March 22, 2026
0

ಹೈದರಾಬಾದ್ ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನದ ವಿರುದ್ಧ ಹಿಂದೆಂದೂ ಕಾಣದಂತಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ...

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

by Shwetha
March 22, 2026
0

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹಾಗೂ ನಾಯಕರ ನಡುವಿನ ವಾಗ್ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಡಮ್ಮಿ ಅಭ್ಯರ್ಥಿಯನ್ನು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 22, 2026
0

ದಿನ ಭವಿಷ್ಯ: 22-03-2026 ಮೇಷ ರಾಶಿ: ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram