ದೇಶದ ಅರ್ಥ ವ್ಯವಸ್ಥೆ ಅಭಿವೃದ್ಧಿ ಹಂತದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದರು. ಅವರು ಮಂಗಳವಾರ ಮೊದಲ ಹಂತದ ಬಜೆಟ್ ಮುಕ್ತಾಯದ ಅಧಿವೇಶನದಲ್ಲಿ ಮಾತನಾಡುತ್ತಾ ದೇಶದ ಅರ್ಥ ವ್ಯವಸ್ಥೆ ಕುಸಿಯುವ ಹಂತದಲ್ಲಿ ಇಲ್ಲ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಐದು ಲಕ್ಷ ಕೋಟಿ ಡಾಲರ್ ಮೌಲ್ಯದ ಅರ್ಥ ವ್ಯವಸ್ಥೆಯನ್ನು ದೇಶ ಹೊಂದಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ವಿತ್ತ ಸಚಿವೆ ಅರ್ಥ ವ್ಯವಸ್ಥೆಯ ಸಾಧನೆಗಳನ್ನು ಹೇಳಿದರು.
ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ, ಕಾರ್ಖಾನೆಗಳಲ್ಲಿನ ಉತ್ಪಾದನೆ ಪ್ರಮಾಣದ ಹೆಚ್ಚಾಗಿದೆ ಎನ್ನುವುದಕ್ಕೆ ಹಿಂದಿನ 3 ತಿಂಗಳ ಅವಧಿಯಲ್ಲಿ ಜಿ.ಎಸ್.ಟಿ ಸಂಗ್ರಹ 1ಲಕ್ಷ ಕೋಟಿ ರೂ ದಾಟಿರುವುದೇ ಸಾಕ್ಷಿ ಎಂದರು.
ಜಗತ್ತಿನ ರಾಷ್ಟ್ರಗಳು ಭಾರತದ ಬಗ್ಗೆ ಹೊಂದಿರುವ ದೃಷ್ಟಿಕೋನ ಈಗ ಬದಲಾಗಿದ್ದು, 2019-20ರ ಎಪ್ರಿಲ್-ನವೆಂಬರ್ ಅವಧಿಯಲ್ಲಿ 24.4 ಬಿಲಿಯನ್ ಡಾಲರ್ಗಳಷ್ಟು ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಇರಾನ್ನ 45 ನಾವಿಕರ ಮೃತದೇಹ ಹಸ್ತಾಂತರ
ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...








