ದೇಶದ ಬೊಕ್ಕಸದಿಂದ ಹಲವು ಬಿಲಿಯನ್ ಡಾಲರ್ಸ್ ದುರ್ಬಳಕೆ ಮಾಡಿರುವುದು ಸಾಬೀತಾದ ಬೆನ್ನಲ್ಲೇ ಸಾಬೀತಾದ ಬೆನ್ನಲ್ಲೇ ಮಲೇಶ್ಯಾದ ಮಾಜಿ ಪ್ರಧಾನಿ ನಜೀಬ್ ರಜಾಕ್ ಅವರು ಭ್ರಷ್ಟಾಚಾರ ಕೇಸಿನಲ್ಲಿ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದೆ. ನಜೀಬ್ ಅವರು 42 ಮಿಲಿಯನ್ ರಿಂಗಿಟ್ ಮೊತ್ತವನ್ನು 1ಎಂಡಿಬಿಯ ಅಧೀನದ ಎಸ್ ಆರ್ ಸಿ ಇಂಟರ್ ನ್ಯಾಷನಲ್ ನಿಂದ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ. ಆದರೆ ಇದರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಹೀಗಾಗ, ಆರೋಪ ಸಾಬೀತಾಗಿದೆ ಎಂದು ಜಡ್ಜ್ ಮೊಹಮ್ಮದ್ ನಜ್ಲಾನ್ ಘಜಾಲಿ ಹೇಳಿದ್ದಾರೆ. 10 ವರ್ಷ ಜೈಲು ಹಾಗೂ ಭಾರಿ ಮೊತ್ತದ ದಂಡವನ್ನು ನಜೀಬ್ ಎದುರಿಸುತ್ತಿದ್ದಾರೆ. 2011 ರಿಂದ 2017 ತನಕ ತೆರಿಗೆ ಪಾವತಿಸಿಲ್ಲ ಎಂದು 400 ಮಿಲಿಯನ್ ಡಾಲರ್ಸ್ ಪಾವತಿಸುವಂತೆ 6 ದಿನಗಳ ಹಿಂದೆ ಹೈಕೋರ್ಟ್ ಆದೇಶ ನೀಡಿದೆ. ಅಲ್ಲದೆ ತಮ್ಮ ಪರಿಸ್ಥಿತಿಗೆ ರಾಜಕೀಯ ಗುರು ಮಹತೀರ್ ಮೊಹಮ್ಮದ್ ಕಾರಣ ಎಂದು ನಜೀಬ್ ದೂಷಿಸಿದ್ದಾರೆ.
ಜನಸಾಮಾನ್ಯರ ಪರ ಧ್ವನಿ ಎತ್ತಿದ್ದೇ ತಪ್ಪಾಯ್ತಾ ಯುವ ನಾಯಕನಿಗೆ ಗೇಟ್‌ಪಾಸ್ ನೀಡಿದ ಆಮ್ ಆದ್ಮಿ ಪಕ್ಷ
ಆಮ್ ಆದ್ಮಿ ಪಕ್ಷದಲ್ಲಿ ಭಾರಿ ಆಂತರಿಕ ಸಂಚಲನ ಮೂಡಿದೆ. ಪಕ್ಷದ ಪ್ರಮುಖ ಯುವ ನಾಯಕ ಹಾಗೂ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ಹೈಕಮಾಂಡ್ ತೀವ್ರ ಸ್ವರೂಪದ...








