ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ Arnab judicial custody
ಮುಂಬೈ, ನವೆಂಬರ್05: ರಿಪಬ್ಲಿಕ್ ಟಿವಿ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಬುಧವಾರ ತಡರಾತ್ರಿ ಪೊಲೀಸ್ ಕಸ್ಟಡಿಯನ್ನು ಅಲಿಬಾಗ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿದೆ ಆದರೆ ಅದರ ಬದಲು 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿದೆ. Arnab judicial custody
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಂಧಿಸಲ್ಪಟ್ಟ ಅರ್ನಾಬ್ ಗೋಸ್ವಾಮಿ ಸೇರಿದಂತೆ ಮೂವರು ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ಹಾಜರುಪಡಿಸಿದ್ದಾರೆ.
ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ 2018 ರಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿಗೆ ಅರ್ನಾಬ್ ಗೋಸ್ವಾಮಿ ಮತ್ತು ಇನ್ನೂ ಇಬ್ಬರು ಕಾರಣವೆಂದು ಆರೋಪಿಸಲಾಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ – ಪದವೀಧರ ಎಂಜಿನಿಯರಿಂಗ್ ಅಪ್ರೆಂಟಿಸ್ ಗೆ ಅರ್ಜಿ ಆಹ್ವಾನ
ನ್ಯಾಯಾಲಯವು ಉಭಯ ಕಡೆಯ ವಾದಗಳನ್ನು ಮತ್ತು ಪ್ರತಿವಾದಗಳನ್ನು ಆಲಿಸಿತು ಮತ್ತು 14 ದಿನಗಳ ನ್ಯಾಯಾಂಗ ಬಂಧನವನ್ನು ನೀಡಿತು.
ಅದೇ ಪ್ರಕರಣದಲ್ಲಿ, ಪೊಲೀಸರು ಮೂವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಪೊಲೀಸ್ ಕಸ್ಟಡಿ ನೀಡಲು ನಿರಾಕರಿಸಿದೆ. ಅಲ್ಲದೇ ,ಅರ್ನಾಬ್ ಗೋಸ್ವಾಮಿ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲು ನ್ಯಾಯಾಲಯಕ್ಕೆ ಯಾವುದೇ ಸರಿಯಾದ ಕಾರಣ ಸಿಕ್ಕಿಲ್ಲ.
ಏತನ್ಮಧ್ಯೆ, ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್ ಗೋಸ್ವಾಮಿ ಅವರ ಪರ ವಕೀಲರು ಅವರ ವಿರುದ್ಧ ಎಫ್ಐಆರ್ ಅನ್ನು ರದ್ದುಪಡಿಸಲು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಡಾ. ರಾಜ್ ಕುಮಾರ್ ಬಾಲಕೃಷ್ಣ ರವರ ಕಾಲಿಗೆ ಅಡ್ಡ ಬಿದ್ದು ಕ್ಷಮೆಯಾಚಿಸಲು ಕಾರಣವಾದ ಆ ಘಟನೆhttps://t.co/Jarz6CPy3j
— Saaksha TV (@SaakshaTv) November 5, 2020
ವಿವಾಹ ವಿಚ್ಛೇದನ ಪಡೆದರೂ ಪತ್ನಿ ಮತ್ತು ಮಕ್ಕಳಿಗೆ ಪತಿಯು ಪಾಲನೆ ಭತ್ಯೆ ನೀಡಬೇಕು – ಅಲಹಾಬಾದ್ ಹೈಕೋರ್ಟ್https://t.co/qTRz4BW2XO
— Saaksha TV (@SaakshaTv) November 5, 2020