ವಿದೇಶಕ್ಕೆ ತೆರಳಲು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಗೆ ಅನುಮತಿ ನೀಡಿದ ಕೋರ್ಟ್….
ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಸಿಲುಕಿಕೊಂಡಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಮೇ 31ರಿಂದ ಜೂನ್ 06ರವರೆಗೆ ವಿದೇಶಕ್ಕೆ ತೆರಳಲು ದೆಹಲಿ ನ್ಯಾಯಾಲಯ ಅನುಮತಿ ನೀಡಿದೆ.
ಅಬುಧಾಬಿಯಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾವು ಭಾಗಿ ಆಗಬೇಕಾಗಿದ್ದರಿಂದ, ವಿದೇಶಕ್ಕೆ ತೆರಳಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಜಾಕ್ವೆಲಿನ್ ಅರ್ಜಿ ಸಲ್ಲಿಸಿದ್ದರು. ಈ ಮನವಿಯನ್ನು ಪರಿಗಣಿಸಿರುವ ದೆಹಲಿ ಪಟಿಯಾಲ್ ಹೌಸ್ ಕೋರ್ಟ್ ವಿದೇಶಕ್ಕೆ ತೆರಳಲು ಅನುಮತಿ ನೀಡಿದೆ.
200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಸುಖೇಶ್ ಚಂದ್ರಶೇಖರ್ ಜತೆ ಸ್ನೇಹ ಹೊಂದಿದೆ ಎನ್ನುವ ಕಾರಣಕ್ಕೆ ವಿದೇಶಿ ಪ್ರಯಾಣ ಬೆಳಸದಂತೆ ಜಾಕ್ವೆಲಿನ್ ಗೆ ಇ ಡಿ ತಾಕೀತು ಮಾಡಿತ್ತು. ನಟಿ ಜಾಕ್ವೆಲಿನ್ ಗೆ ಆರೋಪಿ ಸುಖೇಶ್ 7 ಕೋಟಿ ಮೌಲ್ಯದ ಉಡುಗೊರೆಯನ್ನು ನೀಡಿದ್ದಾನೆ ಎಂದು ಆರೋಪವಿದೆ. ಉಡುಗೊರೆಯನ್ನು ಈಗಾಗಲೇ ಇಡಿ ಜಪ್ತಿ ಮಾಡಿದೆ.
ಇನ್ನೂ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರುವ ಕನ್ನಡದ ಮೊದಲ ಚಿತ್ರ ವಿಕ್ರಾಂತ್ ರೋಣದ ಹಾಡು ಬಿಡುಗಡೆಯಾಗಿದ್ದು ಚಿತ್ರದ ಕ್ರೇಜ್ ಹೆಚ್ಚಿಸಿದೆ. ಕಿಚ್ಚ ಸುದೀಪ್ ಜೊತೆ ಹೆಜ್ಜೆ ಹಾಕಿರುವ ರಾ ರಾ ರಕ್ಕಮ್ಮ ಹಾಡು ಸದ್ಯ ಟ್ರೆಂಡಿಂಗ್ ನಲ್ಲಿದೆ.