ಫೆಬ್ರವರಿ 2021 ರಲ್ಲೇ ಸಿದ್ಧವಾಗಲಿದೆ ಭಾರತದ ಸ್ಥಳೀಯ ಕೋವಿಡ್ ಲಸಿಕೆ ಕೊವಾಕ್ಸಿನ್ COVAXIN launch February 2021
ಹೊಸದಿಲ್ಲಿ, ನವೆಂಬರ್ 06: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಭಾರತದ ಸ್ಥಳೀಯ ಲಸಿಕೆ ಕೊವಾಕ್ಸಿನ್ ಜೂನ್ 2021 ರ ವೇಳೆಗೆ ಶಾಟ್ ಸಿದ್ಧವಾಗಲಿದೆ ಎಂದು ಈ ಮೊದಲು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ಕೊವಾಕ್ಸಿನ್ ಲಸಿಕೆ ಫೆಬ್ರವರಿ 2021 ರ ಹೊತ್ತಿಗೆ ಸಿದ್ಧವಾಗಲಿದೆ ಎಂದು ಹೇಳಲಾಗಿದೆ. COVAXIN launch February 2021
ಈ ಲಸಿಕೆಯನ್ನು ಭಾರತ್ ಬಯೋಟೆಕ್ ಎಂಬ ಖಾಸಗಿ ಕಂಪನಿಯು ಅಭಿವೃದ್ಧಿಪಡಿಸುತ್ತಿದೆ. ಇದು ಸರ್ಕಾರ ನಡೆಸುತ್ತಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೊಂದಿಗೆ ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಸರಕಾರದ ಹಿರಿಯ ವಿಜ್ಞಾನಿಗಳು, ಕೊನೆಯ ಹಂತದ ಪ್ರಯೋಗಗಳು ಔಷಧವು ಇಲ್ಲಿಯವರೆಗೆ ಪರಿಣಾಮಕಾರಿ ಎಂದು ತೋರಿಸಿದೆ ಎಂದು ಹೇಳಿದ್ದಾರೆ. ಇದು ಲಸಿಕೆಯು ಜೂನ್ 2021ಕ್ಕಿಂತ ಮೊದಲೇ ಸಿದ್ಧವಾಗುವ ನಿರೀಕ್ಷೆ ಮೂಡಿಸಿದೆ.
ನವೆಂಬರ್ 5 ರ ಗುರುವಾರ ಸಂಶೋಧನಾ ಸಂಸ್ಥೆಯ ನವದೆಹಲಿ ಕೇಂದ್ರ ಕಚೇರಿಯಲ್ಲಿ ಹಿರಿಯ ಐಸಿಎಂಆರ್ ವಿಜ್ಞಾನಿ ಮತ್ತು ಅದರ ಕೋವಿಡ್ -19 ಕಾರ್ಯಪಡೆಯ ಸದಸ್ಯ ರಜನಿ ಕಾಂತ್ ಈ ಬಗ್ಗೆ ಮಾತನಾಡಿದ್ದಾರೆ.
ಟಿವಿ ರೇಟಿಂಗ್ ಏಜೆನ್ಸಿಗಳ ಮಾರ್ಗಸೂಚಿಗಳನ್ನು ಪರಿಶೀಲಿಸಲು ಕೇಂದ್ರದಿಂದ ಸಮಿತಿ ರಚನೆ
ಹಿರಿಯ ಐಸಿಎಂಆರ್ ವಿಜ್ಞಾನಿ ರಜನಿ ಕಾಂತ್ ಅವರು ಮಾತನಾಡಿ ಲಸಿಕೆ ಉತ್ತಮ ಪರಿಣಾಮಕಾರಿತ್ವವನ್ನು ತೋರಿಸಿದೆ. ಮುಂದಿನ ವರ್ಷ, ಫೆಬ್ರವರಿ ಅಥವಾ ಮಾರ್ಚ್ ಆರಂಭದ ವೇಳೆಗೆ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಮೂರನೇ ಹಂತದ ಪ್ರಯೋಗಗಳು ಮುಗಿಯುವ ಮೊದಲೇ ಜನರಿಗೆ ಕೊವಾಕ್ಸಿನ್ ಚುಚ್ಚುಮದ್ದು ನೀಡಬಹುದೇ ಎಂದು ಆರೋಗ್ಯ ಸಚಿವಾಲಯ ನಿರ್ಧರಿಸಬೇಕಿದೆ ಎಂದು ವರದಿ ತಿಳಿಸಿದೆ.
ರಜನಿಕಾಂತ್, ಹಿರಿಯ ಐಸಿಎಂಆರ್ ವಿಜ್ಞಾನಿ ಇದು ಹಂತ 1 ಮತ್ತು 2 ಪ್ರಯೋಗಗಳಲ್ಲಿ ಮತ್ತು ಪ್ರಾಣಿ ಅಧ್ಯಯನಗಳಲ್ಲಿ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ತೋರಿಸಿದೆ. ಆದ್ದರಿಂದ ಇದು ಸುರಕ್ಷಿತವಾಗಿದೆ. ಆದರೆ 3 ನೇ ಹಂತದ ಪ್ರಯೋಗಗಳು ಮುಗಿಯದ ಹೊರತು ನೀವು 100 ಪ್ರತಿಶತ ಖಚಿತವಾಗಿರಲು ಸಾಧ್ಯವಿಲ್ಲ. ಕೆಲವು ಅಪಾಯವನ್ನು ನೀವು ತೆಗೆದುಕೊಳ್ಳಲು ಸಿದ್ಧರಿದ್ದರೆ, ಲಸಿಕೆ ತೆಗೆದುಕೊಳ್ಳಬಹುದು. ಅಗತ್ಯವಿದ್ದರೆ, ತುರ್ತು ಪರಿಸ್ಥಿತಿಯಲ್ಲಿ ಲಸಿಕೆ ನೀಡುವ ಬಗ್ಗೆ ಸರ್ಕಾರ ಯೋಚಿಸಬಹುದು ಎಂದು ಹೇಳಿದ್ದಾರೆ.
ಕೋವಿಡ್ 19 ಲಸಿಕೆಗಾಗಿ ತುರ್ತು ದೃಢೀಕರಣವನ್ನು ವಿಶೇಷವಾಗಿ ಹೆಚ್ಚಿನ ಅಪಾಯದಲ್ಲಿರುವ ಜನರು ಅಥವಾ ಅಪಾಯದಲ್ಲಿರುವ ವೃದ್ಧರಿಗೆ ನೀಡಲು ಸರ್ಕಾರ ಪರಿಗಣಿಸುತ್ತಿದೆ ಎಂದು ಸೆಪ್ಟೆಂಬರ್‌ನಲ್ಲಿ ಆರೋಗ್ಯ ಸಚಿವ ಹರ್ಷ್ ವರ್ಧನ್ ಹೇಳಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಶತ್ರುವಿನ ಶತ್ರು ಭಾರತದ ಮಿತ್ರ – ಮಲೇಷ್ಯಾ ಮತ್ತು ಟರ್ಕಿಗೆ ನಿರೀಕ್ಷಿಸದ ರೀತಿಯಲ್ಲಿ ಭಾರತದ ಸೂಕ್ತ ಉತ್ತರ#latestnews #Modiji@narendramodihttps://t.co/MkRMGega6I
— Saaksha TV (@SaakshaTv) November 6, 2020
ಒಣ ಕೆಮ್ಮಿನಿಂದ ತ್ವರಿತ ಪರಿಹಾರಕ್ಕಾಗಿ 5 ಅತ್ಯಂತ ಪರಿಣಾಮಕಾರಿ ಮನೆಮದ್ದುhttps://t.co/WID2PLy5gA
— Saaksha TV (@SaakshaTv) November 5, 2020