ಕೋವಿಡ್ 2 ನೇ ಲೆ – ಹೆಮ್ಮಾರಿಗೆ ದೇಶದಲ್ಲಿ ಒಟ್ಟು 719 ವೈದ್ಯರು ಬಲಿ
ನವದೆಹಲಿ: ದೇಶದಲ್ಲಿ ಕೋವಿಡ್-19 ಎರಡನೇ ಅಲೆ ಅವಧಿಯಲ್ಲಿ ಹಗಲು ರಾತ್ರಿ ಜೀವಪಣಕಿಟ್ಟು ಜೀವ ರಕ್ಷಣೆಯ ಕೆಲಸ ಮಾಡ್ತಿರುವ ಕೊರೊನಾ ವಾರಿಯರ್ಸ್, ಅದ್ರಲ್ಲೂ ವೈದ್ಯರು ಕೂಡ ಬಲಿಯಾಗಿದ್ದಾರೆ.. ಈ ರೀತಿ 2ನೇ ಅಲೆಯ ಅವಧಿಯಲ್ಲಿ
ದೇಶದಲ್ಲಿ ಸರಾಸರಿ 719 ವೈದ್ಯರು ಸಾವನ್ನಪ್ಪಿದ್ದಾರೆ. ಭಾರತೀಯ ವೈದ್ಯಕೀಯ ಅಸೋಸಿಯೇಷನ್ ಈ ಬಗ್ಗೆ ಮಾಹಿತಿ ನೀಡಿದೆ. ಇನ್ನೂ ಬಿಹಾರದಲ್ಲಿಯೇ ಗರಿಷ್ಠ ಸಂಖ್ಯೆಯ ವೈದ್ಯರ ಸಾವು ದಾಖಲಾಗಿದೆ. ಬಿಹಾರದಲ್ಲಿ 111, ದೆಹಲಿಯಲ್ಲಿ 109, ಉತ್ತರ ಪ್ರದೇಶದಲ್ಲಿ 79, ಪಶ್ಚಿಮ ಬಂಗಾಳದಲ್ಲಿ 63, ರಾಜಸ್ಥಾನದಲ್ಲಿ 43 ವೈದ್ಯರು ಮೃತಪಟ್ಟಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.