ಆಗಸ್ಟ್ ವೇಳೆಗೆ ಕೊರೊನಾ 3ನೇ ಅಲೆ ಅಪ್ಪಳಿಸಲಿರುವುದು ಖಚಿತ..!
ನವದೆಹಲಿ : ದೇಶದಲ್ಲಿ ಕೋವಿಡ್ 2ನೇ ಅಲೆ ಸದ್ಯ ಇನ್ನೇನು ಕಡಿಮೆಯಾಗ್ತಿದೆ ಅಂತ ಜನರು ನಿರಾಳರಾಗ್ತಿರುವ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗುತ್ತಿದೆ.. ಹೌದು ಕರ್ನಾಟಕ ಸೇರಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗ್ತಿದೆ.. ಈ ನಡುವೆ 3ನೇ ಅಲೆಯ ಎಚ್ಚರಿಕೆಯನ್ನ ನೀಡಿದ್ದಾರೆ ತಜ್ಞರು…
ಆಗಸ್ಟ್ ತಿಂಗಳ ವೇಳೆಗೆ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಏಮ್ಸ್ ನ ಮುಖ್ಯಸ್ಥ ಡಾ.ರಣದಿಪ್ ಗುಲೇರಿಯಾ ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಇನ್ನೂ 3-4 ವಾರಗಳಲ್ಲಿ 3ನೇ ಅಪ್ಪಳಿಸುವ ಸಾಧ್ಯತೆ ದಟ್ಟವಾಗಿದೆ ಎಂದಿದ್ದಾರೆ..
ದೇಶದ ಕೆಲವು ರಾಜ್ಯಗಳಲ್ಲಿ ಲಾಕ್‍ಡೌನ್ ತೆರವುಗೊಳಿಸಲಾಗುತ್ತಿರುವುದರಿಂದ ಜನ ಕೊರೊನಾ ನಿಯಮಗಳನ್ನು ಪಾಲಿಸದೆ ಬೇಕಾಬಿಟ್ಟಿ ಓಡಾಡುತ್ತಿರುವುದರಿಂದ 3ನೇ ಅಲೆ ಆಗಷ್ಟ್ ತಿಂಗಳಲ್ಲಿ ಕಾಣಿಸಿಕೊಂಡರೂ ಆಚ್ಚರಿಪಡುವಂತಿಲ್ಲ ಎಂದಿದ್ದಾರೆ.
ಜನ ಹಳೆಯದ್ದನ್ನು ಮರೆತು ಮತ್ತೆ ಗುಂಪುಗೂಡುತ್ತಿರುವುದು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಕೊರೊನಾ ಸೋಂಕು ಕೆಲವೇ ದಿನಗಳಲ್ಲಿ ತನ್ನ ಕರಾಳತೆ ತೋರಲಿದೆ. ಅದು ದೂರವೇನಿಲ್ಲ. ಆಗಸ್ಟ್ ವೇಳೆಗೆ 3ನೆ ಅಲೆಯ ಪ್ರಭಾವ ಎದುರಿಸುವುದು ಅನಿವಾರ್ಯವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಅಲ್ಲದೇ ಇನ್ನೂ ಆತಂಕಕಾರಿ ವಿಚಾರವೆಂದ್ರೆ 3ನೇ ಅಲೆಯಲ್ಲಿ ಹೆಚ್ಚಾಗಿ ಮಕ್ಕಳೇ ಟಾರ್ಗೆಟ್ ಆಗಲಿದ್ದಾರೆ ಎನ್ನಲಾಗಗ್ತಿದ್ದು, ಇದು ಪೋಷಕರನ್ನ ಆತಂಕಕ್ಕೀಡು ಮಾಡಿದೆ. ಅದು ಅಲ್ದೇ ಲಾಕ್ ಡೌನ್ ನಲ್ಲಿ ಹೆಚ್ಚಾಗಿ ಹೊರಗಡೆ ಆಟವಾಡದೇ , ಮಾಸ್ಕ್ ಧರಿಸಿ ಮಕ್ಕಳಲ್ಲಿ ಇಮ್ಯುನಿಟಿ ಶಕ್ತಿ ಕೂಡ ಕ್ರಮೇಣ ಕುಂದುತ್ತಿದೆ ಎಂಬ ಆತಂಕಕಾರಿ ಸಂಗತಿಯನ್ನ ಇತ್ತೀಚೆಗೆ ಅಧ್ಯಯನವೊಂದು ಬಹಿರಂಗಗೊಳಿಸಿತ್ತು.








