Covid 19 : ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲು ಮುಂದಾದ BBMP ಮಾರ್ಷಲ್ಸ್…
ಚೀನಾ ಜಪಾನ್ ಅಮೇರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿಕೋವಿಡ್ ಹೆಚ್ಚಾಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ದೇಶದಲ್ಲೂ ಅಲರ್ಟ್ ಮಾಡಲಾಗಿದೆ. ಈಗಾಗಲೇ ಸರ್ಕಾರಗಳು ಕೆಲವೊಂದು ಮುನ್ನೆಚ್ಚರಿಕೆ ಸಂದೇಶಗಳನ್ನ ಪ್ರಕಟಿಸಿದ್ದು, ಮತ್ತೆ ಕೋವಿಡ್ ನಿಯಮಗಳನ್ನ ಕಟ್ಟು ನಿಟ್ಟಾಗಿ ಪಾಲಿಸುವಂತೆ ಆದೇಶಿಸಿದೆ.
ಕರೊನಾ ರೂಪಾಂತರಿ ಒಮಿಕ್ರಾನ್ ವೈರಸ್ ನ ಉಪರೂಪಾಂತರವಾದ BF.7 ಮತ್ತೆ ಹರಡಬಹುದು ಎಂಬ ಆತಂಕದ ಹಿನ್ನಲೆ ಬೆಂಗಳೂರಿನಲ್ಲಿ ಬಿಬಿಎಂಪಿ ಅಲರ್ಟ್ ಆಗಿದ್ದು, ಜನರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲು ಮುಂದಾಗಿದೆ.
ಇಂದು ಬೆಳಿಗ್ಗೆಯಿಂದಲೇ ಫೀಲ್ಡ್ ಗೆ ಇಳಿದಿರುವ 441 ಮಾರ್ಷಲ್ ಗಳು ಜನಸಂದಣಿ ಇರುವ ಪ್ರದೇಶದಲ್ಲಿ ಜನರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮಾಡುತ್ತಿದ್ದಾರೆ.
ಕೆ ಆರ್ ಮಾರ್ಕೆಟ್, ಬಸ್, ರೈಲು ನಿಲ್ದಾಣಗಳಲಿ ಸಂಚರಿಸುವವರಿಗೆ ಮಾಸ್ಕ್ ಧರಿಸುವಂತೆ ಮನವೊಲಿಕೆ ಮಾಡಲಾಗುತ್ತಿದೆ. ಒಳಾಂಗಣ ಸಮಾರಂಭಗಳಲ್ಲಿ ಮಾಸ್ಕ ಬಳಕೆಯನ್ನ ಕಡ್ಡಾಯ ಮಾಡಲಾಗಿದೆ.
Covid 19: BBMP marshals come forward to spread awareness about wearing masks…








