18 ವರ್ಷ ಮೇಲ್ಪಟ್ಟವರಿಗೆ ಏ ,10 ರಿಂದ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ…
18 ವರ್ಷ ಮೇಲ್ಪಟ್ಟ ಕೋವಿಡ್ 2 ಡೋಸ್ ಪಡೆದು 9 ತಿಂಗಳಾಗಿರುವ ಎಲ್ಲಾ ಜನತೆಗೂ ಏಪ್ರಿಲ್ 10 ರಿಂದ ಕೋವಿಡ್ ಬೂಸ್ಟರ್ ಡೋಸ್ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ.
ಇಲ್ಲಿಯವರೆಗೂ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಾರಿಯರ್ಸ್ ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ ಜನರಿಗೆ ಮುನ್ನೆಚ್ಚರಿಕೆ ಡೋಸ್ ಗಳನ್ನ ನೀಡಲಾಗುತ್ತಿತ್ತು. ಬೂಸ್ಟರ್ ಡೋಸ್ ಮೊದಲ ಮತ್ತು ಎರಡನೇ ಡೋಸ್‌ನಂತೆಯೇ ಇರುತ್ತದೆ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಕೋವಾಕ್ಸಿನ್ ಪಡೆದವರಿಗೆ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಪಡೆದವರಿಗೆ ಕೋವಿಶೀಲ್ಡ್ ಸಿಗುತ್ತದೆ.
ಇಲ್ಲಿಯವರೆಗೆ, ದೇಶದ ಎಲ್ಲಾ 15 ವರ್ಷ ಮೇಲ್ಪಟ್ಟ ಸುಮಾರು 96% ಜನರು ಕನಿಷ್ಠ ಒಂದು ಕೋವಿಡ್ -19 ಲಸಿಕೆ ಡೋಸ್ ಅನ್ನು ಪಡೆದಿದ್ದಾರೆ ಮತ್ತು 15 ವರ್ಷ ಮೇಲ್ಪಟ್ಟ ಸುಮಾರು 83% ಜನರು ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ 2.4 ಕೋಟಿಗೂ ಹೆಚ್ಚು ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಲಾಗಿದೆ.