COVID 19 CASA UPDATE : ಕಳೆದ 24 ಗಂಟೇಲಿ 2.58 ಲಕ್ಷ ಕೇಸ್ ಪತ್ತೆ
ನವದೆಹಲಿ : ಭಾರತದಲ್ಲಿ ಕೊರೊನಾ ಸೋಂಕಿನ ಅಬ್ಬರ ಮುಂದುವೆರೆದಿದ್ದು, ಕಳೆದ 24 ಗಂಟೆಯಲ್ಲಿ 2,58,089 ಸೋಂಕಿತರು ಪತ್ತೆಯಾಗಿದೆ.
ಇದೇ ಅವಧಿಯಲ್ಲಿ 385 ಮಂದಿ ಹೆಮ್ಮಾರಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇನ್ನು ನಿನ್ನೆ ದೇಶದಲ್ಲಿ 1,51,740 ಸೋಂಕಿತರು ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 352,37,461 ಕ್ಕೆ ಏರಿಕೆಯಾಗಿದೆ.
ಸದ್ಯ ದೇಶದಲ್ಲಿ ಒಟ್ಟು 16,56,341 ಸಕ್ರಿಯ ಪ್ರಕರಣಗಳು ಇವೆ.
ಈವರೆಗೆ ದೇಶದಲ್ಲಿ ಸುಮಾರು 4,86,451 ಮಂದಿ ಮೃತಪಟ್ಟಿದ್ದಾರೆ. ಇನ್ನು 8,209 ಒಮಿಕ್ರಾನ್ ಕೇಸ್ಗಳು ದೃಢಪಟ್ಟಿವೆ.
ನಿನ್ನೆ ದೇಶದಲ್ಲಿ ಪತ್ತೆಯಾಗಿದ್ದ ಪ್ರಕರಣಗಳಿಗಿಂತ ಇವತ್ತು 13 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಡಿಮೆಯಾಗಿವೆ.









