ತಲಪಾಡಿಯಲ್ಲಿ ಕೋವಿಡ್-19 ಚೆಕ್‌ಪೋಸ್ಟ್ – ರಸ್ತೆಯಲ್ಲಿ ಮಲಗಿ ಕೇರಳಿಗರ ಪ್ರತಿಭಟನೆ
ತಲಪಾಡಿ, ಫೆಬ್ರವರಿ23: ಕೇರಳದಲ್ಲಿ ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಅಧಿಕಾರಿಗಳು ಕರ್ನಾಟಕಕ್ಕೆ ಪ್ರವೇಶಿಸುವ ಪ್ರಯಾಣಿಕರನ್ನು ಪರೀಕ್ಷಿಸಲು ಫೆಬ್ರವರಿ 22 ರಿಂದ ಗಡಿಯಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.

ಹೊಸ ಮಾರ್ಗಸೂಚಿಗಳ ಪ್ರಕಾರ ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸದ ಜನರನ್ನು ಕರ್ನಾಟಕದೊಳಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.
ಇದರ ಬೆನ್ನಲ್ಲೇ ಗಡಿಯಲ್ಲಿ ವಾಸಿಸುವ ನಾಗರಿಕರು ಮಂಗಳೂರು ಪ್ರವೇಶಿಸಲು ಗಡಿ ದಾಟಲು ಅನುಮತಿಸಬೇಕೆಂದು ವಾಹನಗಳನ್ನು ನಿಲ್ಲಿಸಿ ಪ್ರತಿಭಟಿಸಿದರು.
ಆರ್‌ಟಿಪಿಸಿಆರ್ ಪರೀಕ್ಷೆಯಿಲ್ಲದೆ ಕೇರಳದ ವಾಹನಗಳನ್ನು ದಾಟಲು ಅನುಮತಿಸದ ಕಾರಣ, ಗಡಿಯಲ್ಲಿ ವಾಸಿಸುವ ನಾಗರಿಕರು ತಲಪಾಡಿ ಚೆಕ್‌ಪೋಸ್ಟ್ ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ದ.ಕ. ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದರು ಮತ್ತು ರಸ್ತೆಗಳಲ್ಲಿ ಮಲಗಿ ಪ್ರತಿಭಟನೆ ನಡೆಸಿದರು.
ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಸ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ರಸ್ತೆ ತೆರವುಗೊಳಿಸಲು ಪ್ರಯತ್ನಿಸಿದಾಗ, ಪ್ರತಿಭಟನಾಕಾರರು “ಕರ್ನಾಟಕ ಪೊಲೀಸ್ ಗೋ ಬ್ಯಾಕ್” ಎಂದು ಘೋಷಣೆ ಕೂಗಿದರು. ಒಂದು ಗಂಟೆಯವರೆಗೂ ಪ್ರತಿಭಟನೆ ಮುಂದುವರಿದಾಗ, ಭದ್ರತಾ ಕಾರಣಗಳಿಗಾಗಿ ಮಂಜೇಶ್ವರ ಪೊಲೀಸರು ಕೂಡ ಅಲ್ಲಿಗೆ ಆಗಮಿಸಿದರು.
ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಸಬ್ ಇನ್ಸ್‌ಪೆಕ್ಟರ್ ಅರುಣ್ ದಾಸ್, ಕಾಸರಗೋಡು ಜಿಲ್ಲಾಡಳಿತದೊಂದಿಗೆ ಈ ಬಗ್ಗೆ ಮಾತನಾಡುವುದಾಗಿ ಮನವರಿಕೆ ಮಾಡಿದರು.
ನಾಳೆಯು ಕರ್ನಾಟಕದವರು ಇದನ್ನು ಮುಂದುವರಿಸಿದರೆ, ಪ್ರತಿಭಟನೆಯು ಮರುದಿನವೂ ಮುಂದುವರಿಯುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಕುರಿತು ಮಾತನಾಡುತ್ತಾ, ಕಾಸರಗೋಡಿನ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಯ ಅಧ್ಯಕ್ಷ ಹರ್ಷಾದ್ ವರ್ಕಾಡ್, ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ ಯಾವುದೇ ವಾಹನವನ್ನು ಗಡಿ ದಾಟದಂತೆ ನಿರ್ಬಂಧಿಸಲಾಗಿಲ್ಲ. ಆದರೆ ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ಹೇಳಿದರು. ಆರ್‌ಟಿಪಿಸಿಆರ್ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಸ್ತುತ ನಿಯಮಗಳನ್ನು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರ ಭೇಟಿಯ ಸಮಯದಲ್ಲಿ ಜಾರಿ ಮಾಡಿರಲಿಲ್ಲ ಎಂದು ಅವರು ಆರೋಪಿಸಿದರು.
ಶುಂಠಿ ಚಹಾದ ಹಲವಾರು ಆರೋಗ್ಯ ಪ್ರಯೋಜನಗಳು https://t.co/mQJ9MC4yAp
— Saaksha TV (@SaakshaTv) February 19, 2021
ವೀಸಾ ಮತ್ತು ಆಟಗಾರರ ಸುರಕ್ಷತೆ ಬಗ್ಗೆ ಭಾರತ ಲಿಖಿತ ಭರವಸೆ ನೀಡದಿದ್ದರೆ ಟಿ 20 ವಿಶ್ವಕಪ್ ಸ್ಥಳಾಂತರಗೊಳಿಸಿ – ಪಾಕಿಸ್ತಾನ ಬೆದರಿಕೆ https://t.co/CNAQObjPvt
— Saaksha TV (@SaakshaTv) February 21, 2021
ಮೊಳಕೆ ಬರಿಸಿದ ಹೆಸರು ಬೇಳೆ ದೋಸೆ https://t.co/stSfacfwUI
— Saaksha TV (@SaakshaTv) February 19, 2021








