ಭಾರತ ನನ್ನ 2ನೇ ತವರು ಇದ್ದಂತೆ : ಭಾರತೀಯರ ನೆರವಿಗೆ ಬಂದ ಬ್ರೆಟ್ ಲೀ
ಹೆಮ್ಮಾರಿ ಕೊರೊನಾ ಕಪಿಮುಷ್ಠಿಯಲ್ಲಿ ಭಾತರ ಸಿಲುಕಿದ್ದು, ದಿನದಿಂದ ದಿನಕ್ಕೆ ಸಾವುಗಳು ಹೆಚ್ಚಾಗುತ್ತಲೇ ಇವೆ. ಭಾರತದ ಈ ಸಂಕಷ್ಟದ ಸ್ಥಿತಿಯನ್ನ ಕಂಡು ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಸಹಾಯ ಹಸ್ತ ಚಾಚುತ್ತಿದ್ದಾರೆ. ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ಮೊನ್ನೆಯಷ್ಟೆ ಆಸೀಸ್ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್ 37 ಲಕ್ಷರೂ ದೇಣಿಗೆ ನೀಡಿದ್ದು, ಇದರ ಬೆನ್ನಲ್ಲೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಭಾರತೀಯರ ನೆರವಿಗೆ ಮುಂದಾಗಿದ್ದಾರೆ. ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಗಾಗಿ ಬ್ರೆಟ್ ಲೀ 1 ಬಿಟ್ಕಾಯಿನ್ (ಸುಮಾರು 41 ಲಕ್ಷ ರೂಪಾಯಿ) ದಾನ ಮಾಡಿ ಹೃದಯ ವಿಶಾಲತೆ ಮೆರೆದಿದ್ದಾರೆ.
ಈ ಕುರಿತು ಮಾತನಾಡಿರುವ ಬ್ರೆಟ್ ಲೀ, ಭಾರತ ನನ್ನ 2ನೇ ತವರು ಇದ್ದಂತೆ. ನನ್ನ ಕ್ರಿಕೆಟಿಂಗ್ ವೃತ್ತಿಜೀವನದಲ್ಲಿ ಮತ್ತು ನಿವೃತ್ತಿಯ ನಂತರ ಇಲ್ಲಿನ ಜನರಿಂದ ನಾನು ತುಂಬಾ ಪ್ರೀತಿ ಪಡೆದಿದ್ದೇನೆ. ಈ ಬಿಕ್ಕಟ್ಟಿನಲ್ಲಿ ಜನರು ಸಾಯುತ್ತಿರುವುದನ್ನು ನೋಡುವುದು ಹೃದಯ ವಿದ್ರಾವಕವಾಗಿದೆ. ಅವರಿಗೆ ಸಹಾಯ ಮಾಡುವ ಅವಕಾಶವನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ಭಾರತದ ನೆರವಿಗೆ ನಿಂತಿದ್ದಾರೆ.
ಅಂದಹಾಗೆ ಬ್ರೇಟ್ ಲೀ ಪ್ರಸ್ತುತ ಐಪಿಎಲ್ ನಲ್ಲಿ ಕಮೆಂಟೇಟರ್ ಹಾಗೂ ವೀಕ್ಷಕ ವಿಶ್ಲೇಷಣೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಪಂಜಾಬ್, ಕೆಕೆಆರ್ ಗಳನ್ನ ಅವರು ಪ್ರತಿನಿಧಿಸಿದ್ದರು.