ಬೆಂಗಳೂರು, ಮೇ 13 : ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಪತ್ತೆ, ಚಿಕಿತ್ಸೆ, ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ವರ್ಷವಿಡೀ ಮುಂದುವರಿಸಲು ನಿರ್ಧರಿಸಿದ್ದು, ಅದಕ್ಕಾಗಿ ಕೋವಿಡ್-19 ನಿಧಿ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಕೊರೋನಾ ಸೋಂಕು ತಡೆಗಟ್ಟಲು ಕೈಗೊಳ್ಳುವ ಕ್ರಮಗಳಿಗೆ ಮತ್ತು ಅರ್ಥಿಕತೆಯ ಮೇಲೆ ಸೋಂಕು ಬೀರಿರುವ ಪರಿಣಾಮಗಳನ್ನು ಸರಿಪಡಿಸಲು ಕೋವಿಡ್-19 ನಿಧಿ ಸ್ಥಾಪಿಸಲು ಚಿಂತನೆ ನಡೆದಿದ್ದು , ಇದಕ್ಕಾಗಿ ನಾನಾ ಇಲಾಖೆಯ ಅನುದಾನ ಕಡಿತ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಕೋವಿಡ್-19 ನಿಧಿಯಡಿ ಕಾಯ್ದಿರಿಸಲು ಇಲಾಖೆಗಳ ಅನುದಾನ ಕಡಿತ ಮಾಡಿದರೆ ಇದು ಬಜೆಟ್ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಇದರ ಬಗ್ಗೆ ಗಂಭೀರ ಪ್ರಯತ್ನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಸರಕಾರ ಈಗಾಗಲೇ ಘೋಷಿಸಿರುವ ಪ್ಯಾಕೇಜ್ ನಡಿ ನೆರವು ಹಂಚಿಕೆ ಮಾರ್ಗಸೂಚಿ ರಚಿಸುವ ಬಗ್ಗೆ ಚರ್ಚೆ ನಡೆಸಿದ್ದು, 2ನೇ ಪ್ಯಾಕೇಜ್ ಘೋಷಣೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.
ಸುನೀತಾ ವಿಲಿಯಮ್ಸ್: 9 ತಿಂಗಳ ಬಾಹ್ಯಾಕಾಶ ಯಾತ್ರೆ ನಂತರ ಭೂಮಿಗೆ ಬಂದಾಯ್ತು…
ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬ್ಯಾರಿ (Butch) ವಿಲ್ಮೋರ್ 9 ತಿಂಗಳ ಬಾಹ್ಯಾಕಾಶ ಯಾತ್ರೆಯ ನಂತರ ಫ್ಲೋರಿಡಾದ ಕರಾವಳಿಯಲ್ಲಿ ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ...