ಕೋವಿಡ್ : ದೇಶದಲ್ಲಿ 2796 ಜನ ಸಾವು, 8,895 ಪ್ರಕರಣಗಳು ಪತ್ತೆ
ನವದೆಹಲಿ : ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 8,895 covid19 ಪ್ರಕರಣಗಳು ಪತ್ತೆಯಾಗಿವೆ.
2796 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಕೇರಳ ಮತ್ತು ಬಿಹಾರ ಸರ್ಕಾರಗಳು ಕೆಲ ದಿನಗಳಿಂದ ಸಾವಿನ ಕುರಿತ ಸಂಖ್ಯೆಗಳನ್ನು ನೀಡಿರಲಿಲ್ಲ. ಇಂದು ಎಲ್ಲಾ ಸಾವಿನ ಸಂಖ್ಯೆಗಳನ್ನು ಒಟ್ಟಿಗೆ ನೀಡಿದ್ದರಿಂದ, ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಜುಲೈ 2020 ರಿಂದ ಈಚೆಗೆ ಇದೇ ಮೊದಲ ಬಾರಿಗೆ ಧೈನಂದಿನ ಕೇಸ್ ಗಳ ಸಂಖ್ಯೆಯಲ್ಲಿ ಇಷ್ಟು ಪ್ರಮಾಣದಲ್ಲಿ ಏರಿಕೆಯಾಗಿರುವುದು..
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,46,33,255 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,73,326 ಕ್ಕೆ ತಲುಪಿದೆ.
ರಾಷ್ಟ್ರೀಯ ಚೇತರಿಕೆ ದರವು ಪ್ರಸ್ತುತ 98.36 ಪ್ರತಿಶತದಷ್ಟಿದೆ. ಇದು ಮಾರ್ಚ್ 2020 ರಿಂದ ಅತಿ ಹೆಚ್ಚು.
ಕಳೆದ 24 ಗಂಟೆಗಳಲ್ಲಿ ಕೋವಿಡ್ ನಿಂದ 6,918 ಗುಣಮುಖರಾಗಿದ್ದಾರೆ.
ಈವರೆಗೆ 34,060,774 ಜನರು ಕೋವಿಡ್ ನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇನ್ನು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 99,155 ಕ್ಕೆ ಇಳಿಕೆಯಾಗಿದೆ.
ದೇಶದಾದ್ಯಂತ ಈವರೆಗೆ 125.8 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ.