Covid 19 | ಡೆಲ್ಟಾಕ್ರಾನ್‌ಗೆ ಕರ್ನಾಟಕವೇ ಹಾಟ್ ಸ್ಪಾಟ್ !?
4ನೇ ಅಲೆಯ ಎಚ್ಚರಿಕೆ ಕೊಟ್ಟ ಆರೋಗ್ಯ ಇಲಾಖೆ
ರೋಗ ಲಕ್ಷಣ ಕಂಡು ಹಿಡಿಯಲು ಇಲಾಖೆ ತಯಾರಿ
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸರ್ವಿಲೆನ್ಸ್
ಆರಂಭಿಕ ಹಂತದಲ್ಲೇ ರೋಗದ ಲಕ್ಷಣ ಗುರುತಿಸಲು ಕ್ರಮ
ಬೆಂಗಳೂರು : ರಾಜ್ಯಕ್ಕೆ ಕೊರೊನಾ ಸೋಂಕಿನ ನಾಲ್ಕನೇ ಅಲೆ ಅಪ್ಪಳಿಸುವ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಹೀಗಾಗಿ ಆರಂಭಿಕ ಹಂತದಲ್ಲಿಯೇ ಸೋಂಕಿನ ಹೊಸ ರೋಗ ಲಕ್ಷಣಗಳು ಹಾಗೂ ವಿಭಿನ್ನ ರೋಗ ಲಕ್ಷಣಗಳನ್ನು ಕಂಡು ಹಿಡಿಯಲು ಆರೋಗ್ಯ ಇಲಾಖೆ ಮುಂದಾಗಿದೆ.
ಅದರ ಭಾಗವಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸರ್ವಿಲೆನ್ಸ್ ಆರಂಭಿಸಿದೆ.
ಕೊರೊನಾ ನಾಲ್ಕನೇ ಅಲೆ ವಿಚಾರವಾಗಿ ಮಾರ್ಚ್ 16 ರಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಕ್ಲಿನಿಕಲ್ ಸರ್ವಿಲೆನ್ಸ್ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.
ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾದಾಗ ಅದರ ಸ್ವಭಾವವನ್ನು ಅಲ್ಲಿನ ವೈದ್ಯರು ಬೇಗ ಗುರುತಿಸಿದ್ದರು.
ಹೀಗಾಗಿ ಒಮಿಕ್ರಾನ್ ವಿರುದ್ಧ ಹೋರಾಡಲು ಸಹಕಾರಿಯಾಗಿತ್ತು.
ಇದೀಗ ಅದೇ ರೀತಿ ನಾಲ್ಕನೇ ಅಲೆ ಮುನ್ಸೂಚನೆ ಇರುವುದರಿಂದ ಕೋವಿಡ್ ರೋಗಿಗಳಲ್ಲಿ ಹೊಸ ರೋಗ ಲಕ್ಷಣಗಳು, ವಿಭಿನ್ನ ರೋಗ ಲಕ್ಷಣಗಳ ಆರಂಭಿಕ ಗುರುತಿಸುವಿಕೆಗಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಕಣ್ಗಾವಲು ಪ್ರಾರಂಭಿಸಲು ಸೂಚಿಸಲಾಗಿದೆ.