ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಮಹಾತ್ಮ ಗಾಂಧೀಜಿಯಂತೆ ಉಡುಗೆ ತೊಟ್ಟು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡ ಬಾಲಕ
ರಾಜ್‌ಕೋಟ್, ಅಕ್ಟೋಬರ್01: ಗುಜರಾತ್‌ನ ರಾಜ್‌ಕೋಟ್‌ನಲ್ಲಿ 10 ವರ್ಷದ ಬಾಲಕನೊಬ್ಬ ಮಹಾತ್ಮ ಗಾಂಧೀಜಿಯಂತೆ ಉಡುಗೆ ತೊಟ್ಟು ಕೋವಿಡ್-19 ಪರೀಕ್ಷೆ ಮಾಡಿಸಿಕೊಂಡ ಘಟನೆ ನಡೆದಿದೆ.
ಗಾಂಧಿ ಜಯಂತಿಗಿಂತ ಸ್ವಲ್ಪ ದಿನದ ಮುಂದೆ ನಡೆದ ಈ ಘಟನೆಯ ಪೋಟೋಗಳು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಬಾಲಕನನ್ನು ಪ್ರಶಂಸಿದ್ದಾರೆ.
ಕೇಕ್ ತರುವ ಹಣದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಂಚಿ : ಬಚ್ಚೇಗೌಡ ಮನವಿ
ಬಾಪು ಅವರ ಸಿಗ್ನೇಚರ್ ರೌಂಡ್ ಕನ್ನಡಕಗಳೊಂದಿಗೆ ಸಂಪೂರ್ಣ ಬಿಳಿ ಬಟ್ಟೆಗಳನ್ನು ಧರಿಸಿ, ಕೋವಿಡ್ ಪರೀಕ್ಷೆಗೆ ಒಳಗಾದ ಬಾಲಕ ಪರೀಕ್ಷೆ ಮಾಡಿಸಿಕೊಳ್ಳುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಬಯಸುತ್ತೇನೆ ಎಂದು ಹೇಳಿದ್ದಾನೆ.
ನನ್ನ ಸ್ವ್ಯಾಬ್ ಮಾದರಿಗಳನ್ನು ಕೊರೋನವೈರಸ್ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ. ಜನರು ಪರೀಕ್ಷೆಯ ಬಗ್ಗೆ ಭಯಪಡಬಾರದು. ನಾವು ಸಹಕರಿಸಿದರೆ ಮಾತ್ರ ನಮ್ಮ ದೇಶ ಆರೋಗ್ಯಕರವಾಗಿರುತ್ತದೆ ಎಂದು 10 ವರ್ಷದ ಬಾಲಕ ಮಾಧ್ಯಮಗಳಿಗೆ ಹೇಳಿದ್ದಾನೆ.
Gujarat: A 10-year-old boy from Rajkot dressed up as Mahatma Gandhi and went for his #COVID19 test.
He said, "My swab samples have been taken for coronavirus test. People should not be apprehensive about the test. Our country will be healthy only if we cooperate." (29.09.2020) pic.twitter.com/pfFoSwsgUb
— ANI (@ANI) September 30, 2020
ಗುಜರಾತ್‌ನಲ್ಲಿ ಇಲ್ಲಿಯವರೆಗೆ ಒಟ್ಟು 1,36,004 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, 3,442 ಸಾವುಗಳಾಗಿವೆ.
ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 16,603 ಆಗಿದ್ದು, ಮಂಗಳವಾರ 1,381 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ.
ರಾಜ್ಯದಲ್ಲಿ ಒಟ್ಟು 34.6 ಲಕ್ಷ ಕೋವಿಡ್ -19 ಪರೀಕ್ಷೆಗಳನ್ನು ನಡೆಸಲಾಗಿದೆ. ಆರೋಗ್ಯ ಇಲಾಖೆಯ ಪ್ರಕಾರ, ಗುಜರಾತ್‌ನ ಚೇತರಿಕೆಯ ಪ್ರಮಾಣ 85% ಆಗಿದ್ದು, ಒಟ್ಟು 1,15,959 ಮಂದಿ ಗುಣಮುಖರಾಗಿದ್ದಾರೆ. COVID-19 ನಿಂದ ಮಂಗಳವಾರ 1,383 ರೋಗಿಗಳು ಚೇತರಿಸಿಕೊಂಡಿದ್ದಾರೆ.
ಅಕ್ಟೋಬರ್15 ರವರೆಗೂ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗೆ ಭೇಟಿ ನೀಡಲು ಅನುಮತಿ ಇಲ್ಲ
ಕಳೆದ ಎರಡು ವಾರಗಳಿಂದ ಅಹಮದಾಬಾದ್ ನಗರದಲ್ಲಿ ದೈನಂದಿನ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಸೆಪ್ಟೆಂಬರ್ 17 ರಂದು, ನಗರವು 151 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದ್ದರೆ, ಅದು ಈಗ 180 ಕ್ಕೆ ಏರಿದೆ. ಕೋವಿಡ್-19 ಸೋಂಕು ಹರಡುವುದನ್ನು ತಡೆಯುವ ಪ್ರಯತ್ನದಲ್ಲಿ, ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಸೋಮವಾರ ರಾತ್ರಿ 10 ರಿಂದ ಬೆಳಿಗ್ಗೆ 6 ರವರೆಗೆ ವಿವಿಧ ರಸ್ತೆಗಳಲ್ಲಿ ಆಹಾರ ಮಳಿಗೆಗಳು ಸೇರಿದಂತೆ ಎಲ್ಲವನ್ನೂ ಮುಚ್ಚುವಂತೆ ಆದೇಶಿಸಿದೆ.
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








