Covid-19 Update | 10 ದಿನಗಳಲ್ಲಿ 9 ಸಾವಿರ ಕೇಸ್ ಗಳಿಂದ 1 ಲಕ್ಷಕ್ಕೆ ಕೇಸ್ ಏರಿಕೆ covid-19 update india
ನವದೆಹಲಿ : ದೇಶದಲ್ಲಿ ಕೊರೊನಾ ಸೋಂಕು ಅಬ್ಬರ ಜೋರಾಗಿದೆ. ಕಳೆದ 10 ದಿನಗಳಲ್ಲಿ 9 ಸಾವಿರ ಕೇಸ್ ಗಳಿಂದ 1 ಲಕ್ಷಕ್ಕೆ ಏರಿಕೆಯಾಗಿದೆ.
ಗುರುವಾರ 90 ಸಾವಿರದ ಗಡಿದಾಟಿದ್ದ ಕೋವಿಡ್ -19 ಕೇಸ್ ಗಳ ಸಂಖ್ಯೆ ಇಂದು 1 ಲಕ್ಷದ ಗಡಿ ದಾಟಿದೆ. ಇವತ್ತು ದೇಶದಾದ್ಯಂತ 1 ಲಕ್ಷ 17 ಸಾವಿರ ಕೇಸ್ ಗಳು ಪತ್ತೆಯಾಗಿವೆ.
ಇಂದಿಗೆ ಹತ್ತು ದಿನಗಳ ಹಿಂದೆ ಅಂದ್ರೆ ಡಿಸೆಂಬರ್ 28 ರಂದು 9,195 ಪ್ರಕರಣಗಳು ಕಂಡು ಬಂದಿದ್ದವು.
ಇಂದು 302 ಸಾವುಗಳೊಂದಿಗೆ ಸಾವಿನ ಸಂಖ್ಯೆ 4,83,178 ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3,71,363 ಆಗಿದ್ದು, ಇದುವರೆಗೆ ದೇಶದಲ್ಲಿ 149.66 ಕೋಟಿ ಡೋಸ್ ಲಸಿಕೆಯನ್ನ ನೀಡಲಾಗಿದೆ.