ದೇಶದಲ್ಲಿಂದು ಪತ್ತೆಯಾದ ಕೊರೊನಾ ಸೋಂಕಿತರೆಷ್ಟು, ಬಲಿಯಾದವರೆಷ್ಟು..!
ದೇಶದಲ್ಲಿ ಕ್ರಮೇಣ ಕೊರೊನಾ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆ ಇಳಿಮುಖವಾಗ್ತಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 23,067 ಕೊರೊನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿದ್ದು, ಮಹಾಮಾರಿಗೆ ಒಟ್ಟು 336 ಮಂದಿ ಬಲಿಯಾಗಿದ್ದಾರೆ.
ಟರ್ಕಿಯಲ್ಲಿ 99,000 ಕೇಜಿ ಚಿನ್ನದ ನಿಕ್ಷೇಪ ಪತ್ತೆ..!
ಇನ್ನೂ ದೇಶದಲ್ಲಿ ಕಳೆದ ಒಂದು ವಾರದಿಂದ ಸುಮಾರು 20 ಸಾವಿರ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಅಂದ್ರೆ ಹಿಂದಿಗಿಂತಲೂ ಶೇ.6.6ರಷ್ಟು ಇಳಿಕೆಯಾಗಿದೆ. ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,01 ಕೋಟಿ ದಾಟಿದೆ. ಈ ಮೂಲಕ ಸೋಂಕಿತರ ಪಟ್ಟಿಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿ ಭಾರತವಿದೆ. ಇನ್ನೂ ಸಾವಿನ ಸಂಖ್ಯೆ 1,47,092 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2.81 ಲಕ್ಷ ಇದೆ.
ದಿನಗಳೆದಂತೆ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ದೇಶದಲ್ಲಿ ಆತಂಕ ಮನೆ ಮಾಡಿದೆ. ಬ್ರಿಟನ್ ನಿಂದ ರೂಪಾಂತರಗೊಂಡ ಕೊರೊನಾ ತಳಿ ಭಾರತಕ್ಕೆ ಲಗ್ಗೆ ಇಟ್ಟಿದ್ದು, ಭಾರತಕ್ಕೆ ಬಂದವರಲ್ಲೂ ಸೋಂಕು ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








