ಕೊರೊನಾ ಭೀತಿ : ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ರದ್ದು
ಬೆಂಗಳೂರು: ಪ್ರತಿ ವರ್ಷ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಆಯೋಜಿಸುವ ಫಲಪುಷ್ಪ ಪ್ರದರ್ಶನ ದೇಶಿ ವಿದೇಶಿಗರನ್ನ ಆಕರ್ಶಿಸುತ್ತೆ. ಲಕ್ಷಾಂತರ ಜನರು ಈ ಫಲ ಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುತ್ತಿದ್ದರು. ಆದ್ರೆ ಈ ಬಾರಿ ಜನರಿಗೆ ನಿರಾಸೆಯುಂಟಾಗಿದೆ. ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ತೋಟಗಾರಿಕಾ ಇಲಾಖೆ ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ರದ್ದುಪಡಿಸಿದೆ.
ಈ ವರ್ಷ ಸಣ್ಣ ಪ್ರಮಾಣದಲ್ಲಿ ಕೊರೊನಾ ಕುರಿತು ಜಾಗೃತಿ ನೀಡುವ ಫಲಪುಷ್ಪ ಪ್ರದರ್ಶನ ನಡೆಸಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ರೂಪಾಂತರಿ ಕೊರೊನಾ ಭೀತಿ ಜನರಲ್ಲಿ ಕಾಡುತ್ತಿದ್ದು, ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ. ಜತೆಗೆ ಮೈಸೂರು ಉದ್ಯಾನ ಕಲಾಸಂಘ ಸಹ ಫಲಪುಷ್ಪ ಪ್ರದರ್ಶನ ಆಯೋಜಿಸುವುದು ಬೇಡ ಎಂದು ಹೇಳಲಾಗಿದೆ.
ಜನರಲ್ ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಸಜ್ಜು: ಕರ್ನಾಟಕದ ಕಾಶ್ಮೀರಕ್ಕೆ ಬರ್ತಿದ್ದಾರೆ ರಾಷ್ಟ್ರಪತಿ
ತೋಟಗಾರಿಕೆ ಸಚಿವ ನಾರಾಯಣಗೌಡ ಅವರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿಯೂ ಪ್ರದರ್ಶನ ರದ್ದಾಗಿತ್ತು. ಈ ಬಾರಿ ಸಿದ್ಧತೆಗಳನ್ನು ನಡೆಸಲಾಗಿಲ್ಲ.ಹಣವೂ ಇಲ್ಲ ಸರಳವಾಗಿ ಮಾಡಿದರೆ ಜನ ಬರುವುದು ಅನುಮಾನ, ಹೀಗಾಗಿ ಪ್ರದರ್ಶನವನ್ನೇ ರದ್ದುಗೊಳಿಸುವಂತೆ ಮನವಿ ಮಾಡಲಾಗಿತ್ತು ಎಂದು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








