Covid 19 – ರಾಜ್ಯಕ್ಕೆ ಕಾಲಿಟ್ಟಿತಾ XBB.1.5. ರೂಪಾಂತರಿ ವೈರಸ್ ???
ಅಮೆರಿಕಾದಲ್ಲಿ ಕರೋನಾ ಹೆಚ್ಚಳಕ್ಕೆ ಕಾರಣವಾಗಿದ್ದ ವೈರಸ್ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದೆ ಎಂದು ಹೇಳಲಾಗುತ್ತಿದೆ. ಕರೋನಾ ರೂಪಾಂತರಿ ವೈರಸ್ XBB.1.5. ಭಾರತಕ್ಕೆ ಕಾಲಿಟ್ಟಿದ್ದು ಐದು ಪ್ರಕರಣಗಳು ವರದಿಯಾಗಿವೆ, ಇದರಲ್ಲಿ ಒಂದು ಪ್ರಕರಣ ಕರ್ನಾಟಕದಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಒಮಿಕ್ರಾನ್ನ ಮತ್ತೊಂದು ರೂಪಾಂತರಿಯೇ ಈ XBB.1.5
INSACOG ಪ್ರಕಾರ, ಭಾರತದ ಇತರ ರಾಜ್ಯಗಳನ್ನ ಗಮನಿಸುವುದಾದರೆ ರಾಜಸ್ಥಾನದಲ್ಲಿ 1 ಕೇಸ್, ಗುಜರಾತ್ನಲ್ಲಿ 3 ಕೇಸ್ ಹಾಗೂ ಕರ್ನಾಟಕದಲ್ಲಿ XBB.1.5. ವೈರಸ್ನ ಒಂದು ಕೇಸ್ ಪತ್ತೆಯಾಗಿದೆ.
XBB.1.5 ರೂಪಾಂತರವು ಅಮೆರಿಕಾದಲ್ಲಿ ಇತ್ತೀಚಿನ ಕೋವಿಡ್ ಪ್ರಕರಣಗಳಲ್ಲಿ ಶೇ.40 ಸೋಂಕು ಹೆಚ್ಚಾಗಲು ಕಾರಣವಾಗಿದೆ.
ಇನ್ನೂ ರಾಜ್ಯದಲ್ಲಿ ಕರೋನಾ ಅಪ್ಡ್ಟೇಟ್ ಕುರಿತು ಮಾತನಾಡುವಾದರೇನಿನ್ನೆ (ಡಿಸೆಂಬರ್ 3) 19 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಡಿಸೆಂಬರ್ 3ರಂದು ಆಸ್ಪತ್ರೆಯಿಂದ 6 ರೋಗಿಗಳು ಡಿಸ್ಚಾರ್ಜ್ ಆಗಿದ್ದಾರೆ.
Covid 19 – XBB.1.5. covid mutant virus found in karnataka








