ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖ Saaksha Tv
ನವದೆಹಲಿ: ದೇಶದಲ್ಲಿ ಕೆಳೆದ 24 ಗಂಟೆಯಲ್ಲಿ 34,113 ಹೊಸದಾಗಿ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.
ದೈನಂದಿನ ಏರಿಕೆ ದರವು 3.19 ಪ್ರತಿಶತದಷ್ಟಿದ್ದು, ಸಾಪ್ತಾಹಿಕ ಏರಿಕೆ ಪ್ರಮಾಣವು ಶೇ 3.99 ರಷ್ಟಿದೆ. ಇನ್ನೂ ಸಕ್ರಿಯ ಪ್ರಕರಣಗಳು 4,78,882 ಲಕ್ಷ ಇದ್ದು, ಇದರ ಪ್ರಮಾಣವು ಶೇ 1.12 ರಷ್ಟಿದೆ. ಕಳೆದ 24 ಗಂಟೆಯಲ್ಲಿ 91,930 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣವು ಶೇಕಡಾ 97.68 ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 346 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 172.95 ಕೋಟಿ ಕೊರೊನಾ ಲಸಿಕೆಯನ್ನು ಹಾಕಲಾಗಿದ್ದು, ಕಳೆದ 24 ಗಂಟೆಯಲ್ಲಿ 10,67,908 ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದೆ.