covid covacsine
ಕೊರೊನಾ ಕೋವ್ಯಾಕ್ಸಿನ್ ಪ್ರಯೋಗ: ಮೊದಲ ಲಸಿಕೆ ಪಡೆಯಲು ಸಿದ್ಧರಾದ ಹರಿಯಾಣದ ಸಚಿವ
ಹರಿಯಾಣ: ಹೆಮ್ಮಾರಿ ಕೊರೊನಾ ನಿರ್ಮೂಲನೆಗಾಗಿ ಕೊರೊನಾ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಹರಿಯಾಣದಲ್ಲಿ ನಡೆಯಲಿದೆ. ಈ ಪ್ರಯೋಗದಲ್ಲಿ ಹರಿಯಾಣ ಆರೋಗ್ಯ ಸಚಿವರಾದ ಅನಿಲ್ ವಿಜ್ ಅವರು ಸ್ವಯಂಸೇವಕರಾಗಿ ಪಾಲ್ಗೊಳ್ಳುವ ನಿರ್ಧಾರ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹೌದು ಅನಿಲ್ ವಿಜ್ ಅವರು ಮೊದಲ ಲಸಿಕೆಯ ಪ್ರಯೋಗಕ್ಕೆ ಒಳಗಾಗಲಿದ್ದಾರೆ. ಈ ಮೂಲಕ ಮೊದಲ ಲಸಿಕೆಯನ್ನ ಪಡೆಯಲಿದ್ದಾರೆ. ಭಾರತ್ ಬಯೋಟೆಕ್ ಹರ್ಯಾಣದಲ್ಲಿ ನವೆಂಬರ್ 20 ರಂದು ಕೋವ್ಯಾಕ್ಸಿನ್ ಕೊರೊನಾ ಲಸಿಕೆಯ ಮೇಲೆ ಮೂರನೇ ಹಂತದ ಪ್ರಯೋಗ ನಡೆಸಲಿದ್ದಾರೆ.

ಭಾರತ್ ಬಯೋಟೆಕ್ ಕೋವ್ಯಾಕ್ಸಿನ್ ಲಸಿಕೆ (covid covacsine)ಯ ಮೂರನೇ ಹಂತದ ಪ್ರಯೋಗದ ಬಗ್ಗೆ ಸೋಮವಾರ ತಿಳಿಸಿದ್ದರು. ಇದೀಗ ಈ ಕುರಿತು ಸ್ವತಃ ಸಚಿವ ಅನಿಲ್ ಟ್ವೀಟ್ ಮಾಡಿದ್ದು, ಮೊದಲ ಲಸಿಕೆ ನನಗೇ ನೀಡುವಂತೆ ಕಂಪನಿ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಸಚಿವರೊಂದಿಗೆ ಪ್ರಯೋಗದಲ್ಲಿ ಇನ್ನೂ 20 ಸಾವಿರ ಮಂದಿ ಸ್ವಯಂಸೇವಕರು ಪಾಲ್ಗೊಳ್ಳಲಿದ್ದಾರೆ. ಕೊವಿಡ್- ಲಸಿಕೆಯ ಕೊನೆಯ ಹಂತದ ಕ್ಲಿನಿಕಲ್ ಪ್ರಯೋಗಗಳ ಅಧ್ಯಯನಕ್ಕಾಗಿ ಸ್ವತಂತ್ರ ರಾಷ್ಟ್ರೀಯ ಆರೋಗ್ಯ ರಚಿಸಿರುವ ದತ್ತಾಂಶ ಸುರಕ್ಷತಾ ಮಾನಿಟರಿಂಗ್ ಮಂಡಳಿ ಲಸಿಕೆ 94.5 ಪ್ರತಿಶತದಷ್ಟು ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕಂಡುಹಿಡಿದಿದೆ ಎಂದು ಮಾಡರ್ನ ಸಂಸ್ಥೆ ತಿಳಿಸಿದೆ.

28 ದಿನಗಳ ಅಂತರದಲ್ಲಿ ಸ್ವಯಂ ಸೇವಕರಿಗೆ 2 ಡೋಸ್ಗಳನ್ನು ನೀಡಲಾಗುತ್ತದೆ. ಇನ್ನು ವೈದ್ಯಕೀಯ ಪ್ರಯೋಗಗಳಲ್ಲಿ ಶೇ.94.5ರಷ್ಟು ಪರಿಣಾಮಕಾರಿಯಾಗಿದೆ ಎನ್ನಲಾಗಿರುವ ಕೊವಿಡ್-19 ಲಸಿಕೆ ಅಭಿವೃದ್ಧಿಪಡಿಸಿರುವ ಅಮೆರಿಕ ಮೂಲದ ಬಯೋಟೆಕ್ ಸಂಸ್ಥೆ ಮಾಡೆರ್ನಾ ಸಂಸ್ಥೆಯೊಂದಿಗೆ ಭಾರತ ಮಾತುಕತೆ ನಡೆಸುತ್ತಿದೆ ಎಂದು ಬಲವಾದ ಮೂಲಗಳಿಂದ ತಿಳಿದುಬಂದಿದೆ.
‘1980’ ರ ಕಾಲದ ಸಸ್ಪೆನ್ಸ್ ಥ್ರಿಲ್ಲರ್ ಕಹಾನಿಯಲ್ಲಿ ಪ್ರಿಯಾಂಕಾ..!
covid covacsine
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








