ಭಾರತದಲ್ಲಿ ಕೊರೊನಾಗೆ ಬಲಿಯಾಗಿದ್ದು 32 ಲಕ್ಷ ಮಂದಿ : ಅಧ್ಯಯನ COVID infection caused ~3 million deaths in India
ನವದೆಹಲಿ : ಕೊರೊನಾ ಮೂರನೇ ಅಲೆ ದೇಶದಲ್ಲಿ ಈಗಾಗಲೇ ಆರ್ಭಟಿಸಲು ಶುರು ಮಾಡಿದೆ.
ಸದ್ಯ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಲಕ್ಷದ ಗಡಿದಾಟಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಈ ಮಧ್ಯೆ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದ್ದು, ಕೊರೊನಾ ವೈರಸ್ ಗೆ ಭಾರತದಲ್ಲಿ 32 ಲಕ್ಷ ಮಂದಿ ಬಲಿಯಾಗಿದ್ದಾರೆ ಎಂದು ಅಧ್ಯಯನವೊಂದು ಪ್ರಕಟಿಸಿದೆ.
ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ದೇಶದಲ್ಲಿ ಈವರೆಗೆ 4,83,178 ಜನರು ಕೋವಿಡ್ನಿಂದ ಸಾವನ್ನಪ್ಪಿದ್ದಾರೆ.
COVID infection caused ~3 million deaths in India (mostly in 2021), according to research led by Dr. Prabhat Jha (@countthedead) & published in @ScienceMagazine. This suggests a need to revise current @WHO global mortality estimates https://t.co/Dql3OZlUzQ @UofT_dlsph pic.twitter.com/ZAOptOYJjf
— Unity Health Toronto (@UnityHealthTO) January 6, 2022
ಆದ್ರೆ ‘ಸೈನ್ಸ್’ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಸುಮಾರು 3.2 ಮಿಲಿಯನ್ ಸೋಂಕಿತರು ಭಾರತದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಡಾ. ಪ್ರಭಾತ್ ಝಾ ನೇತೃತ್ವದಲ್ಲಿ ಭಾರತ, ಕೆನಡಾ ಮತ್ತು ಅಮೆರಿಕದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ಇದರ ಪ್ರಕಾರ 32 ಲಕ್ಷ ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ.