ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ Saaksha Tv
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಮಾಣವು ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 5,019 ಕೊರೊನಾ ಪ್ರಕರಣಗಳು ದಾಖಲಾಗಿದೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಶೇ 4.25 ರಷ್ಟು ಪ್ರಕರಣಗಳು ಪತ್ತೆಯಾಗಿವೆ ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 52,013ರಷ್ಟಿದೆ. ರಾಜ್ಯದಲ್ಲಿ ಒಟ್ಟು 13,923 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,17,119 ಲಕ್ಷ ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದಾರೆ.
ಅಲ್ಲದೇ ಈವರೆಗೆ 38,25,538 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಕೊರೊನಾ ಮರಣ ಪ್ರಮಾಣ ಶೇ.0.77% ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 80,171 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 39 ಜನರು ಮೃತಪಟ್ಟಿದ್ದಾರೆ. ಒಟ್ಟು 1,17,956 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
ಇನ್ನೂ ಬೆಂಗಳೂರಿನಲ್ಲಿ ಒಟ್ಟು 2,315 ಹೊಸ ಕೇಸ್ ಪತ್ತೆಯಾಗಿದ್ದು, ಇಂದು 17 ಮರಣ ಪ್ರಕರಣ ದಾಖಲಾಗಿದೆ. ಬಾಗಲಕೋಟೆ 32, ಬಳ್ಳಾರಿ 220, ಬೆಳಗಾವಿ 196, ಬೆಂಗಳೂರು ಗ್ರಾಮಾಂತರ 52, ಬೆಂಗಳೂರು ನಗರ 2,315, ಬೀದರ್ 26, ಚಾಮರಾಜನಗರ 83, ಚಿಕ್ಕಬಳ್ಳಾಪುರ 47, ಚಿಕ್ಕಮಗಳೂರು 31, ಚಿತ್ರದುರ್ಗ 94, ದಕ್ಷಿಣ ಕನ್ನಡ 90, ದಾವಣಗೆರೆ 44, ಧಾರವಾಡ 124, ಗದಗ 20, ಹಾಸನ 101, ಹಾವೇರಿ 49, ಕಲಬುರಗಿ 96, ಕೊಡಗು 171, ಕೋಲಾರ 58, ಕೊಪ್ಪಳ 45, ಮಂಡ್ಯ 117, ಮೈಸೂರು 261, ರಾಯಚೂರು 87, ರಾಮನಗರ 26, ಶಿವಮೊಗ್ಗ 141, ತುಮಕೂರು 234, ಉಡುಪಿ 78, ಉತ್ತರ ಕನ್ನಡ 76, ವಿಜಯಪುರ 88 ಮತ್ತು ಯಾದಗಿರಿಯಲ್ಲಿ 17 ಪ್ರಕರಣಗಳು ಪತ್ತೆಯಾಗಿವೆ.









