ಭಾರತದಲ್ಲಿ ಕೋವಿಡ್ ಮಹಾಸ್ಪೋಟ : ಒಂದೇ ದಿನ 58,097 ಕೇಸ್ ಗಳು ದಾಖಲು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾ ಮಹಾಸ್ಪೋಟವೇ ಆಗಿದೆ.. ದೇಶದಲ್ಲಿ ಕೊರೊನಾ 3ನೇ ಅಲೆ ಒಕ್ಕರಿಸಿದ್ದು , ಒಂದುವರಾದ ಹಿಂದೆ ಕೇವಲ , 5 ಸಾವಿರ , 6 ಸಾವಿರದ ವರೆಗೂ ದಾಖಲಾಗ್ತಿದ್ದ ದೈನಂದಿನ ಕೇಸ್ ಗಳ ಸಂಖ್ಯೆಯಲ್ಲಿ ಧಿಡೀರ್ 55 % ಏರಿಕೆಯಾಗಿದೆ.. ಹೌದು ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 58,097 ಹೊಸ ಕೇಸ್ ಗಳು ದಾಖಲಾಗಿರೋದು ದೇಶದ ಜನರ ಆತಂಕ ಹೆಚ್ಚಿಸಿದೆ..
ಕೊರೊನಾ ಸೋಂಕಿನಿಂದಾಗಿ ಒಟ್ಟು 534 ಸಾವುಗಳು ಸಂಭವಿಸಿದೆ.. ಇದೇ ಅವಧಿಯಲ್ಲಿ ದೇಶದಲ್ಲಿ ಒಟ್ಟು 15,389 ಜನ ಚೇರಿಸಿಕೊಂಡಿದ್ದು ಡಿಸ್ಚಾರ್ಜ್ ಆಗಿದ್ದಾರೆ… ಒಟ್ಟು ಚೇತರಿಕೆ ದರ ಸುಮಾರು 98.01 ಪ್ರತಿಶತಕ್ಕೆ ಏರಿದೆ.. ಒಟ್ಟಾರೆ ಈವರೆಗೂ ಚೇತರಿಸಿಕೊಂಡಿರುವವರ ಸಂಖ್ಯೆ 3,43,21,803ಕ್ಕೆ ತಲುಪಿದೆ.
1,000 ಕೋವಿಡ್ ಪ್ರಕರಣಗಳನ್ನು ದಾಟಿದ ನಂತರ ಎಲ್ಲಾ ಜಿಲ್ಲೆಗಳು ಸಿನಿಮಾ ಹಾಲ್ ಗಳು, ಜಿಮ್ಗಳು, ಸ್ಪಾಗಳನ್ನ ಮುಚ್ಚಬೇಕಾಗುತ್ತದೆ ಎಂದು ಸರ್ಕಾರ ಹೇಳಿದೆ. ಮದುವೆಗೆ, 100 ಜನರಿಗೆ ಮುಚ್ಚಿದ ಸ್ಥಳಗಳಲ್ಲಿ ಅವಕಾಶವಿದ್ದರೆ, 50% ತೆರೆದ ಜಾಗದಲ್ಲಿ ಅನುಮತಿ ನೀಡಿದೆ..








