Covid update – ಕಳೆದ 24 ಗಂಟೆಯಲ್ಲಿ 16 ಸಾವಿರ ಪ್ರಕರಣ ಪತ್ತೆ…
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 16 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 24 ಮಂದಿ ಸಾವನ್ನಪ್ಪಿದ್ದಾರೆ. ದೈನಂದಿನ ಸೋಂಕಿನ ಪ್ರಮಾಣವು ಶೇಕಡಾ 4.85 ಕ್ಕೆ ಏರಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಬೆಳಗ್ಗೆ ನವೀಕರಿಸಿದ ಮಾಹಿತಿಯ ಪ್ರಕಾರ, 24 ಗಂಟೆಗಳಲ್ಲಿ 16,135 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. 13,958 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 1,13,864 ಕ್ಕೆ ಏರಿದೆ. ಕಳೆದ 24 ಗಂಟೆಗಳಲ್ಲಿ 2153 ಹೆಚ್ಚಳವಾಗಿದೆ.
ಕೋವಿಡ್ ಅಪ್ಡೇಟ್
ಸೋಮವಾರ 16,135 ಹೊಸ ಸೋಂಕಿತರು ಪತ್ತೆ.
ಒಟ್ಟು ಸೋಂಕಿತರ ಸಂಖ್ಯೆ 4,35,18,564
1,13,864 ಪ್ರಸ್ತುತ ಸಕ್ರಿಯ ಪ್ರಕರಣಗಳು,
24 ಗಂಟೆಗಳಲ್ಲಿ 2153 ಹೆಚ್ಚಳ
ಒಟ್ಟು ಸಾವಿನ ಸಂಖ್ಯೆ 5,25,223,
24 ಗಂಟೆಗಳಲ್ಲಿ 24 ಸಾವು