Covid Vaccine : ಮೂಗಿನ ಮೂಲಕ ನೀಡುವ ವ್ಯಾಕ್ಸಿನ್ ದರ ಎಷ್ಟು..??
ಇನ್ನೇನು ಕೊರೊನಾ ಮಹಾಮಾರಿಯ ಆತಂಕ ಕಡಿಮೆಯಾಗಿ ಇಡೀ ವಿಶ್ವಾದ್ಯಂತ ಜನರು ಸಹಜ ಸ್ಥಿತಿಗೆ ಮರಳುತ್ತಿದ್ದಂತಹ ಹೊತ್ತಲ್ಲೇ ಮತ್ತೆ ಕೊರೊನಾ ಹಾವಳಿ ಶುರುವಾಗಿದೆ..
ಈ ಹೊತ್ತಲ್ಲೇ ಮೂಗಿನ ಮುಖೇನ ನೀಡಲಾಗುವ ಲಸಿಕೆಯನ್ನ ಅಭಿವೃದ್ಧಿ ಪಡಿಸಲಾಗಿದ್ದು , ಬಳಕೆಗೂ ಅನುಮತಿ ನೀಡಲಾಗಿದೆ..
ಕೋವ್ಯಾಕ್ಸಿನ್ ಲಸಿಕೆಯನ್ನು ಅಭಿವೃದ್ಧಿಪಡಿಸಿರುವ ಹೈದರಾಬಾದ್ ನ ಭಾರತ್ ಬಯೋಟೆಕ್ ಇಂಟ್ರಾನಾಸನಲ್ ಕೋವಿಡ್ ಲಸಿಕೆಯನ್ನು ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದೀಗ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಿಷ್ಟು ಹಣ ಪಾವತಿಸಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ.
ವರದಿಗಳ ಪ್ರಕಾರ ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಯನ್ನು ಜಿಎಸ್ ಟಿ ಹೊರತುಪಡಿಸಿ 800 ರೂ.ಗೆ ಪಡೆದುಕೊಳ್ಳಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಇದರ ಪ್ರತಿ ಡೋಸ್ಗೆ 325 ರೂ. ಬೆಲೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಭಾರತ ಸರ್ಕಾರ ಮೂಗಿನ ಮೂಲಕ ಪಡೆಯಬಹುದಾದ ಲಸಿಕೆಗೆ ಅನುಮೋದನೆ ನೀಡಿದೆ. ಇದನ್ನು ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ತೆಗೆದುಕೊಂಡವರು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು. ಸೂಜಿ ರಹಿತವಾಗಿರುವ iNCOVACC ಲಸಿಕೆ ಜನವರಿ 4ನೇ ವಾರದಲ್ಲಿ ಲಭ್ಯವಾಗಲಿದೆ.
ಮೂಗಿನಿಂದ ಪಡೆಯಬಹುದಾದ iNCOVACC ಲಸಿಕೆಯನ್ನು 2 ಡ್ರಾಪ್ನಂತೆ ಹಾಕಲಾಗುತ್ತದೆ. ಒಂದು ಬಾರಿ ಈ ಲಸಿಕೆಯನ್ನು ಪಡೆದ ಬಳಿಕ ಇನ್ನೊಂದು ಲಸಿಕೆಯನ್ನು 4 ವಾರಗಳ ಬಳಿಕ ಹಾಕಿಸಿಕೊಳ್ಳಬೇಕಾಗುತ್ತದೆ.