ಮಹಾರಾಷ್ಟ್ರ : ಇಂದಿನಿಂದ ಗರ್ಭಿಣಿಯರಿಗೂ ಕೊರೋನಾ ಲಸಿಕೆ ವಿತರಣೆ
ಮುಂಬೈ : ಇಡೀ ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನವು ವೇಗ ಪಡೆದುಕೊಂಡಿದೆ.. ಈ ನಡುವೆ ಕೊರೊನಾ ಹಾಟ್ ಸ್ಪಾಟ್ ಆಗಿದ್ದ ಮಹಾರಾಷ್ಟ್ರದಲ್ಲಿ ಇಂದಿನಿಂದ (ಜುಲೈ 15) ಗರ್ಭಿಣಿಯರಿಗೂ ಕೋವಿಡ್ ಲಸಿಕೆ ವಿತರಿಸಲಾಗುತ್ತದೆ.
ಬೃಹತ್ ಮುಂಬೈ ಮಹಾನಗರದ ಪೌರಾಡಳಿತವು ಗರ್ಭಿಣಿ ಮಹಿಳೆಯರಿಗೆ ಕೊವಿಡ್-19 ಲಸಿಕೆ ನೀಡುವ ವಿಶೇಷ ಆಭಿಯಾನವನ್ನು ಆರಂಭಿಸಲಿದೆ. ಜುಲೈ 15ರಿಂದ ಆರಂಭಗೊಳ್ಳುವ ಈ ಅಭಿಯಾನವು ನಗರದಾದ್ಯಂತ ಇರುವ 35 ಲಸಿಕಾ ಕೇಂದ್ರಗಳ ಪೈಕಿ ಒಂದರಲ್ಲಿ ಆರಂಭವಾಗಲಿದೆ.
ಅದಕ್ಕಾಗಿ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ ಎನ್ನಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವ ಅಂಶ ಹಲವಾರು ಸಾಮಾಜಿಕ ಕಾರ್ಯಕರ್ತರು, ಸಾರ್ವಜನಿಕರು ಮತ್ತು ಶಿವ ಸೇನೆ ಪಕ್ಷದ ಸಂಸದೆ ಪ್ರಿಯಾಂಕಾ ಚತುರ್ವೇದಿ ಮುನ್ನೆಲೆಗೆ ತಂದಿದ್ದರು.
ಮ್ಯಾನ್ಮಾರ್ : ಆಂಗ್ ಸೂ ಕಿ ವಿರುದ್ಧ ಮತ್ತೆ 4 ಹೆಚ್ಚುವರಿ ಪ್ರಕರಣ ದಾಖಲು
ಮೇ ತಿಂಗಳವರೆಗೆ ಎದೆ ಹಾಲುಣಿಸುವ ಮಹಿಳೆಯರು ಲಸಿಕೆ ಪಡೆಯಲು ಅರ್ಹರು ಎಂದಾದರೆ ಗರ್ಭಿಣಿಯರು ಏಕೆ ಅಲ್ಲ ಎನ್ನುವ ಟೀಕೆ ಕೇಳಿಬಂದಿತ್ತು. ಗರ್ಭಿಣಿ ಮಹಿಳೆಯರ ಮೇಲೆ ಲಸಿಕೆಯ ಕ್ಲಿನಿಕಲ್ ಟ್ರಯಲ್ಗಳು ನಡೆದಿಲ್ಲ ಮತ್ತು ಅವರಿಗೆ ಲಸಿಕೆ ನೀಡದರೆ ಆಗಬಹದಾದ ಅಡ್ಡ ಪರಿಣಾಮಗಳು ಮತ್ತು ಅದು ಅವರಲ್ಲಿ ಎಷ್ಟರಮಟ್ಟಿಗೆ ಪರಿಣಾಮಕಾರಿ ಎನ್ನುವ ಬಗ್ಗೆ ಮಾಹಿತಿ ಲಭ್ಯವಿಲ್ಲದ ಕಾರಣ ಅವರನ್ನು ಲಸಿಕೆ ಕಾರ್ಯಕ್ರಮದಲ್ಲಿ ಸೇರಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಆದರೆ ಜೂನ್ನಲ್ಲಿ ನಿಲುವು ಬದಲಿಸಿದ ಕೇಂದ್ರ ಅರೋಗ್ಯ ಸಚಿವಾಲಯವು, ಗರ್ಭಿಣಿ ಮಹಿಳೆಯರು ಲಸಿಕೆಯನ್ನು ಹಾಕಿಸಿಕೊಳ್ಳಲೇ ಬೇಕು ಎಂದು ಹೇಳಿತು. ಮಾರಣಾಂತಿಕ ಸೋಂಕಿನಿಂದ ಲಸಿಕೆ ಮೂಲಕ ರಕ್ಷಣೆ ಪಡೆಯುವ ಅಧಿಕಾರ ಮತ್ತು ಹಕ್ಕು ಅವರಿಗಿದೆಯೆಂದು ಇಲಾಖೆ ಹೇಳಿತ್ತು. ಇನ್ನು ಮುಂಬೈ ಮಹಾನಗರದಲ್ಲಿ ಬುಧವಾರದವರೆಗೆ ಒಟ್ಟು 62,33,629 ಡೋಸ್ ಕೊರೋನವೈರಸ್ ಲಸಿಕೆ ನೀಡಲಾಗಿದ್ದು, ಈ ಪೈಕಿ 13,68,580 ಫಲಾನುಭವಿಗಳು ಎರಡನೇ ಡೋಸ್ ಪಡೆದಿದ್ದಾರೆ ಎಂದು ಬಿಎಂಸಿ ತಿಳಿಸಿದೆ.








