ದೇಶದಲ್ಲಿ ಮುಂದುವರೆದ ಕೊರೊನಾ ಆರ್ಭಟ: ಒಂದೇ ದಿನ 18,088 ಜನರಿಗೆ ಸೋಂಕು..!
ದೇಶದಲ್ಲಿ ಕಳೆದ 24 ಗಂಟೆಯಲ್ಲಿ 18,088 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಮಹಾಮಾರಿಗೆ ಒಂದೇ ದಿನ 264 ಜನರು ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 1,03,74,932ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 1,50,144ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಯಲ್ಲಿ 21,314 ಮಂದಿ ಗುಣಮುಖಿತರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು ಒಟ್ಟಾರೆ ಗುಣಮುಖಿತರ ಸಂಖ್ಯೆ 99,97,272 ಆಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,27,546ಕ್ಕೆ ಇಳಿಕೆಯಾಗಿದೆ. ಇತ್ತ ದೇಶದಲ್ಲಿ ಬ್ರಿಟನ್ ಕೊರೊನಾ ವೈರಸ್ ಹಾವಳಿಯೂ ಸಹ ಹೆಚ್ಚಾಗ್ತಲೇ ಇದ್ದು, ಜನರನ್ನ ಮತ್ತಷ್ಟು ಆತಂಕಕ್ಕೆ ಗುರಿಯಾಗಿಸಿದೆ. ಹೌದು.. ಈವರೆಗೂ ದೇಶದಲ್ಲಿ ಬ್ರಿಟನ್ ಕೊರೊನಾ ವೈರಸ್ ಪತ್ತೆಯಾದವರ ಸಂಖ್ಯೆ 71ಕ್ಕೇರಿದೆ.
ಅತಿಥಿಗಳು, ಕೇಳಿದ ಗಿಫ್ಟ್ ಕೊಡಲಿಲ್ಲ ಅಂತ ಮದುವೆ ದಿನವೇ ವಧು ಮಾಡಿದ್ದೇನು ನೋಡಿ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








