ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ 50,000 ರೂಪಾಯಿ ಪರಿಹಾರ – ಸುಪ್ರೀಂ ಕೋರ್ಟ್
ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪ್ರತಿ ರಾಜ್ಯದಲ್ಲೂ ಕೂಡ 50,000 ರೂಪಾಯಿ ಪರಿಹಾರ ನೀಡಲು ಸುಪ್ರೀಂ ಕೋರ್ಟ್ ಸೂಚಿಸಿದೆ. 50,000 ರೂಗಳ ಪರಿಹಾರ ನೀತಿಯನ್ನ ಸೋಮವಾರ ಸುಪ್ರೀಂ ಕೋರ್ಟ್ ಅನುಮೋದಿಸಿದೆ.
ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಎ ಎಸ್ ಬೋಪಣ್ಣ ಅವರ ಪೀಠವು ಈ ಸೂಚನೆ ನೀಡಿದೆ. ಇನ್ನೂ ಪಲಾನುಭವಿಗಳಿಗೆ ಅರ್ಜಿ ಸಲ್ಲಿಸಿದ 30 ದಿನಗಳಲ್ಲಿ ಪರಿಹಾರ ಧನವನ್ನು ವಿತರಿಸಬೇಕು ಎಂದು ನ್ಯಾಯಾಲಯವು ಇದೇ ವೇಳೆ ತಾಕೀತು ಮಾಡಿದೆ.
ವ್ಯಕ್ತಿಯು ತನ್ನ ಮನೆಯಲ್ಲಿ ಅಥವಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ ಕೋವಿಡ್ -19 ಸಾವು ಎಂದು ಪರಿಗಣಿಸಲಾಗುತ್ತದೆ, ಕುಟುಂಬದ ಸದಸ್ಯರು ಸಾವಿಗೆ ಕಾರಣ ನಿಜಕ್ಕೂ ಕೋವಿಡ್ ಎಂದು ದೃಡೀಕರಿಸಿ ಅಧಿಕಾರಿಗಳಿಗೆ ಸರಿಯಾದ ದಾಖಲೆಗಳನ್ನ ತೋರಿಸಿದರೆ ಅಂತವರಿಗೆ ಪರಿಹಾರ ಧನ ನೀಡಬೇಕು. ಪ್ರತಿ ರಾಜ್ಯದಲ್ಲಿಯೂ ಪರಿಹಾರ ಹಣ ನೀಡಲೇಬೇಕು ಎಂದು ಆದೇಶಿಸಿದೆ.








