ಕೊರೊನಾ ಲಸಿಕೆಯ 4ನೇ ಬೂಸ್ಟರ್ ಡೋಸ್ ಗೆ ಇಸ್ರೇಲ್ ನಲ್ಲಿ ಅನುಮತಿ
ಇಸ್ರೇಲ್ : ಇಸ್ರೇಲ್ ನಲ್ಲಿ ಕೋವಿಡ್-19 ವಿರುದ್ಧದ ಲಸಿಕೆಯ 4ನೇ ಬೂಸ್ಟರ್ ನೀಡಲು ಇಸ್ರೇಲ್ ಅನುಮೋದನೆ ನೀಡಿದೆ. ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಆತಂಕ ಹೆಚ್ಚುತ್ತಿರುವ ಪರಿಣಾಮ, ಬೂಸ್ಟರ್ ಡೋಸ್ ಅಗತ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಹೀಗಾಗಗಿ ವಿಶ್ವದ ಹಲವು ದೇಶಗಳು ಈಗಾಗಲೇ ಕೋವಿಡ್-19 ಲಸಿಕೆಯ 3ನೇ ಡೋಸ್ ಆಗಿ ಬೂಸ್ಟರ್ ಡೋಸ್ ನೀಡುತ್ತಿವೆ.
ಇಸ್ರೇಲ್ 4ನೇ ಬೂಸ್ಟರ್ ನೀಡಲು ಅನುಮೋದನೆ ನೀಡಿ ವಿಶ್ವದಲ್ಲೇ ಮೊದಲ ರಾಷ್ಟ್ರ ಎನಿಸಿಕೊಂಡಿದೆ. ರೋಗನಿರೋಧಕ ಶಕ್ತಿ ಇರುವ ಜನರಿಗೆ ನಾವು ಕೋವಿಡ್ ಲಸಿಕೆಯ ನಾಲ್ಕನೇ ಬೂಸ್ಟರ್ ಡೋಸ್ ,ನೀಡಲು ಅನುಮೋದಿಸಿದ್ದೇವೆ ಎಂದು ಆರೋಗ್ಯ ಸಚಿವಾಲಯದ ವ್ಯವಸ್ಥಾಪಕ ನಿರ್ದೇಶಕ ನಾಚ್ಮನ್ ಆಶ್ ತಿಳಿಸಿದ್ದಾರೆ.
ಅಪರಿಚಿತೆ ಎಂದುಕೊಂಡು ತನ್ನ ಮಗಳನ್ನೇ ಗುಂಡಿಟ್ಟು ಕೊಂದ ತಂದೆ
ಯುಎಸ್ ಆಹಾರ ಮತ್ತು ಔಷಧ ಆಡಳಿತವು ಕಳೆದ ವಾರ ಫೈಜರ್‌ನ ಪ್ಯಾಕ್ಸ್‌ಲೋವಿಡ್ ಅನ್ನು 12 ವರ್ಷ ಮೇಲ್ಪಟ್ಟವರಿಗೆ ನೀಡಬಹುದು ಎಂದು ಘೋಷಿಸಿತ್ತು. ಇಸ್ರೇಲ್ ನ ಒಟ್ಟು ಜನಸಂಖ್ಯೆ 90.4 ಲಕ್ಷ. ಈ ಪೈಕಿ 40.2 ಲಕ್ಷ ಮಂದಿ ಈಗಾಗಲೇ ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಇಸ್ರೋಲ್‌ನ ಶೆಬಾ ಮೆಡಿಕಲ್ ಸೆಂಟರ್ ಕ್ಲಿನಿಕಲ್ ಪ್ರಯೋಗ ನಡೆಸಿದ ನಂತರ ಬೂಸ್ಟರ್ ಗೆ ಅನುಮೋದನೆ ನೀಡಲಾಗಿದೆ.