11 ದಿನ ಮರದ ಮೇಲೆಯೇ ಕುಳಿತು ಐಸೋಲೇಷನ್ ಆಗಿರುವ ಸೋಂಕಿತ ಬಾಲಕ..!
ಹೈದರಾಬಾದ್ : ದೇಶದಲ್ಲಿ ಕೊರೊನಾ 2ನೇ ಅಲೆ ಆತಂಕ ಭೀಕರವಾಗಿದ್ದು, ಜನ ಬೆಡ್ ಕೊರತೆ , ಆಕ್ಸಿಜನ್ ಕೊರತೆಯಿಂದಾಗಿ ಪರದಾಡ್ತಿದ್ದಾರೆ. ಅನೇಕ ಸೋಂಕಿತರು ನರಳ ನರಳಿ ಪ್ರಾಣ ಬಿಟ್ಟಿದ್ದಾರೆ. ಈ ನಡುವೆ ಕೊರೊನಾ ಸೋಂಕಿತ ಬಾಲಕನೊಬ್ಬ ಮನೆಯಲ್ಲಿ ಐಸೋಲೇಷನ್ ಆಗಲು ಜಾಗವಿಲ್ಲದಕ್ಕೆ 11 ದಿನ ಮರದ ಮೇಲೆಯೇ ಕಾಲ ಕಾಳೆದಿದ್ದಾನೆ.. ಅಲ್ಲಿಯೇ ಐಸೋಲೇಷನ್ ಆಗಿರುವ ಘಟನೆ ತೆಲಂಗಾಣ ನಲಗೊಂಡ ಜಿಲ್ಲೆಯ ಕೊತಾನಂದಿಕೊಂಡ ಗ್ರಾಮದಲ್ಲಿ ನಡೆದಿದೆ..
ಶಿವ ಎಂಬ ಕೊರೊನಾ ಸೋಂಕಿತ ಬಾಲಕ 11 ದಿನಗಳಿಂದ ಮರದ ಮೇಲೆಯೇ ಕುಳಿತ್ತಿದ್ದಾನೆ. ಈತನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮನೆಯವರಿಗೆ ಹರಡಬಾರದು ಎಂದು ಪ್ರತ್ಯೇಕವಾಗಿ ಹೋಂ ಐಸೋಲೇಷನ್‍ನಲ್ಲಿ ಇರಬೇಕಿತ್ತು. ಆದ್ರೆ ಇವರದ್ದು ತೀರಾ ಚಿಕ್ಕ ಮನೆಯಾಗಿದ್ದರಿಂದ ಬಾಲಕ ಈ ರೀತಿ ಮಾಡಿದ್ದಾನೆ. ಕುಳಿತಿದ್ದಾನೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.