‘ಚೀನಾದ ಲ್ಯಾಬ್ ನಿಂದ ಕೋವಿಡ್ ವೈರಸ್ ಸೋರಿಕೆಯಾಗಿರೋದಕ್ಕೆ ಪುರಾವೆ ಇಲ್ಲ’..!
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಈ ನಡುವೆ ಚೀನಾದ ಮಾರುಕಟ್ಟೆಯಿಂದ ಕೋವಿಡ್ ಹರಡಿಲ್ಲ ಬದಲಾಗಿ ಚೀನಾದ ವುಹಾನ್ ನ ಲ್ಯಾಬ್ ನಿಂದ ಈ ವೈರಸ್ ಹರಡಿದ್ದು, ಇದು ಚೀನಾದಿಂದ ನಡೆಸಲಾಗಿರುವ ಜೆನೆಟಿಕ್ ವಾರ್ ಎಂಬ ಆರೋಪಗಳು ಕೇಳಿಬಮದಿವೆ.. ಅಲ್ಲದೇ ಅಮೆರಿಕಾ ಲ್ಯಾಬ್ ನಿಂದಲೇ ವೈರಸ್ ಹರಡಿರುವುದಾಗಿ ಬಲವಾಗಿ ಪ್ರತಿಪಾದಿಸುತ್ತಿದೆ.. ಆದ್ರೆ ಕಪಟಿ ಚೀನಾ ಇದನ್ನ ಒಪ್ಪಲು ತಯಾರಿಲ್ಲ.
ಈ ನಡುವೆ ಚೀನಾದ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ ಎಂಬ ಸಿದ್ಧಾಂತವನ್ನು ಬೆಂಬಲಿಸಲು ವೈಜ್ಞಾನಿಕವಾಗಿ ಮೌಲ್ಯೀಕರಿಸಿದ ಯಾವುದೇ ಪುರಾವೆಗಳಿಲ್ಲ. ಇತ್ತೀಚಿನ, ಉನ್ನತ ಅಧ್ಯಯನಗಳು ಕೊರೊನಾ ವೈರಸ್ ಪ್ರಕೃತಿಯಲ್ಲಿ ವಿಕಸನಗೊಂಡಿದೆ ಎಂದು ಬಲವಾಗಿ ಸೂಚಿಸುತ್ತವೆ ಎಂದು ವಿಜ್ಞಾನಿಗಳ ಗುಂಪೊಂದು ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ ಬರೆದಿದೆ.
ಹೌದು ಈ ವರದಿಯನ್ನು ವಿಶ್ವದಾದ್ಯಂತದ ಎರಡು ಡಜನ್ ಜೀವಶಾಸ್ತ್ರಜ್ಞರು, ಪರಿಸರ ವಿಜ್ಞಾನಿಗಳು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ವೈದ್ಯರು, ಸಾರ್ವಜನಿಕ ಆರೋಗ್ಯ ತಜ್ಞರು ಮತ್ತು ಪಶುವೈದ್ಯರು ಸಂಗ್ರಹಿಸಿದ್ದಾರೆ. ವೈರಸ್ ಪ್ರಕೃತಿಯಲ್ಲಿ ವಿಕಸನಗೊಂಡಿದೆ ಎಂಬುದಕ್ಕೆ ಹೊಸ, ವಿಶ್ವಾಸಾರ್ಹ ಮತ್ತು ಪೀರ್-ರಿವ್ಯೂಡ್ ಪುರಾವೆಗಳಿಂದ ಹೊರಬಂದ ಬಲವಾದ ಸುಳಿವನ್ನು ವೈಜ್ಞಾನಿಕ ವರದಿಯಲ್ಲಿ ಉಲ್ಲೇಖಿಸಲಾಗಿದ್ದು ನಾವು ಅದನ್ನು ನಂಬುತ್ತೇವೆ. ಆದರೆ, ಕೊರೊನಾ ವೈರಸ್ ಪ್ರಯೋಗಾಲಯದಿಂದ-ಸೋರಿಕೆಯಾಗಿದೆ ಎಂಬ ವಾದವು ವೈಜ್ಞಾನಿಕವಾಗಿ ಮೌಲ್ಯೀಕರಿಸುವ ಪುರಾವೆಗಳಿಲ್ಲದೆ ಉಳಿದುಕೊಂಡಿವೆ ಎಂದು ಅಧ್ಯಯನಕಾರರು ಜರ್ನಲ್ನಲ್ಲಿ ಬರೆದಿದ್ದಾರೆ.
ಅದೇ ವಿಜ್ಞಾನಿಗಳ ತಂಡವು ಕಳೆದ ವರ್ಷ ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಯಲ್ಲಿ ಲ್ಯಾಬ್ ಸೋರಿಕೆ ಕಲ್ಪನೆಯನ್ನು ಪಿತೂರಿ ಸಿದ್ಧಾಂತವೆಂದು ತಳ್ಳಿಹಾಕಿತ್ತು. 2019 ರ ಡಿಸೆಂಬರ್ನಲ್ಲಿ ಮೊದಲ ಪ್ರಕರಣ ವರದಿಯಾಗಿದ್ದ ಚೀನಾದ ನಗರ ವುಹಾನ್ನ ಲ್ಯಾಬ್ನಿಂದ ವೈರಸ್ ನುಸುಳಿರುವ ಸಾಧ್ಯತೆ ಸೇರಿದಂತೆ ವೈರಸ್ ಮೂಲದ ಬಗ್ಗೆ ಹಲವು ದೇಶಗಳು ಹೆಚ್ಚಿನ ತನಿಖೆಗೆ ಮುಂದಾದ ಬೆನ್ನಲ್ಲೇ ಈ ವರದಿ ಪ್ರಕಟಗೊಂಡಿದೆ.