ರಾಜ್ಯದಲ್ಲಿ 3000 ಕೊರೊನಾ ಸೋಂಕಿತರು ನಾಪತ್ತೆ..! ಫೋನ್ ನಂಬರ್ ಗಳು ಸ್ವಿಚ್ ಆಫ್ – ಆರ್ ಅಶೋಕ್
ಬೆಂಗಳೂರು: ರಾಜ್ಯದಲ್ಲಿ 2 ನೇ ಅಲೆ ಭೀಕರತೆಗೆ ಜನ ತತ್ತರಿಸಿಹೋಗಿರುವ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಚಾರ ತಿಳಿದುಬಂದಿದೆ. ಕರ್ನಾಟಕದಲ್ಲಿ ಸುಮಾರು 3000 ಕೊರೋನಾ ರೋಗಿಗಳು ನಾಪತ್ತೆಯಾಗಿರುವುದಾಗಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ನಾಪತ್ತೆಯಾಗಿರುವ ಸೋಂಕಿತರ ಹುಡುಕಾಟಕ್ಕಾಗಿ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಸಚಿವ ಅಶೋಕ್ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಸುಮಾರು 3000 ಮಂದಿ ಕೊರೋನಾ ರೋಗಿಗಳ ಸಂಪರ್ಕ ತಪ್ಪಿ ಹೋಗಿದೆ.
ಈ ವ್ಯಕ್ತಿಗಳು ತಮ್ಮ ಫೋನ್ ಆನ್ ನಲ್ಲಿಟ್ಟು ಪೊಲೀಸರ ಹುಡುಕಾಟಕ್ಕೆ ಸಹಾಯ ಮಾಡಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ನಾಪತ್ತೆಯಾಗಿರುವ ಸುಮಾರು 3000 ದಷ್ಟು ಮಂದಿ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅವರ ಪತ್ತೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.








