ರೈಲು ನಿಲ್ದಾಣದಲ್ಲಿ ಕೊರೊನಾ ಟೆಸ್ಟ್ – ಓಡೋಡಿ ಹೋದ ಪ್ರಯಾಣಿಕರು..! – VIDEO VIRAL
ಬಿಹಾರ : ದೇಶದಲ್ಲಿ ಒಂದೆಡೆ ಮಹಾಮಾರಿ ರೌದ್ರಾವತಾರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ. ಮತ್ತೊಂದೆಡೆ ಲಸಿಕೆ, ಕೊರೊನಾ ಪರೀಕ್ಷಗಳ ಮೇಲಿನ ಗೊಂದಲ ಗಳ ನಡುವೆ, ವದಂತಿಗಳು , ಅಡ್ಡ ಪರಿಣಾಮಗಳ ಭಯದಿಂದ ಆತಂಕಕ್ಕೂ ಒಳಗಾಗಿದ್ದಾರೆ. ಇತ್ತ ಸರ್ಕಾರ ದೇಶಾದ್ಯಂತ ಸಾರ್ವಜನಿಕ ಸ್ಥಳಗಳು , ಆಸ್ಪತ್ರೆಗಳು ಸಾಲದಕ್ಕೆ ಮನೆ ಮನೆಗೂ ತೆರಳಿ ಕೊರೊನಾ ಪರೀಕ್ಷೆ ಮಾಡುವುದನ್ನ ತೀವ್ರಗೊಳಿಸಿದೆ. ಜೊತೆಗೆ ಲಸಿಕೆ ಅಭಿಯಾನವೂ ಅದೇ ಸ್ಪೀಡ್ ನಲ್ಲಿ ಮುಂದುವರೆದಿದೆ. ಆದ್ರೆ ಇದಕ್ಕೆ ಸರ್ಕಾರ ಸಿಕ್ಕಾಪಟ್ಟೆ ಕಸರತ್ತು ಮಾಡ್ಬೇಕಿದೆ. ಯಾಕಂದ್ರೆ ಜನರು ಕೊರೊನಾ ಪರೀಕ್ಷೆ ಹೆಸರು ಕೇಳ್ತಿದ್ದಂತೆ ದೂರ ದೂರ ಓಡ್ತಿದಾರೆ.. ಇದು ಆರೋಗ್ಯ ಇಲಾಖೆಗೆ ದೊಡ್ಡ ತಲೆ ನೋವಾಗಿದೆ. ಇದಕ್ಕೆ ತಾಜಾ ಉದಾಹರಣೆ ಬಿಹಾರದಲ್ಲಿ ನಡೆದಿರುವ ಪ್ರಸಂಗ..
यह दृश्य कल रात बक्सर स्टेशन का हैं और ये यात्री पुणे -पटना से उतरे हैं और कोरोना जाँच ना कराना पड़े इसलिए भाग रहे हैं @ndtvindia @Anurag_Dwary @suparba pic.twitter.com/cWxDDoP26X
— manish (@manishndtv) April 16, 2021
ಹೌದು ರೈಲಿನಿಂದ ಇಳಿಯುತ್ತಿದ್ದಂತೆ ಜನರೆಲ್ಲಾ ಕೋವಿಡ್ ಪರೀಕ್ಷಾ ಸಿಬ್ಬಂದಿಯನ್ನ ನೋಡಿ ಎದ್ನೋ ಬಿದ್ನೋ ಅಂತ ಓಡೋಡಿ ಹೋಗಿದ್ದಾರೆ. ಜನ ಹೀಗೆ ಓಡೋಡಿ ಹೋಗಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾನಾ ಚರ್ಚೆಗಳಿಗೆ ಕಾರಣವಾಗಿದೆ. ರೈಲಿನಿಂದ ಇಳಿದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಮಾಡುತ್ತಾರೆ ಅಂತಾ ಗೊತ್ತಾಗಿದ್ದೇ ತಡ ನಿಲ್ದಾಣದಿಂದ ಹೊರಗೆ ಹೋಗಲು ಮುಗಿಬಿದ್ದಿದ್ದಾರೆ. ಈ ಮಧ್ಯೆ ಆರೋಗ್ಯ ಸಿಬ್ಬಂದಿ ಕೆಲ ಪ್ರಯಾಣಿಕರನ್ನು ತಡೆದು ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವಂತೆ ಹೇಳಿದಾಗ ಹಿಂದೇಟು ಹಾಕಿದ್ದಾರೆ. ರೈಲ್ವೆ ನಿಲ್ದಾಣದಿಂದ ಹೊರಗೆ ಓಡಿ ಹೋಗಿದ್ದಾರೆ.
ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಓಪನ್ ಬುಕ್ ಎಕ್ಸಾಂ
‘ಕುಂಭಮೇಳದಿಂದ ಕೊರೊನಾ ಪ್ರಸಾದದ ರೂಪದಲ್ಲಿ ಹರಡಲಿದೆ’..!
ಕೊರೊನಾ ಹಾವಳಿ – JEE ಪರೀಕ್ಷೆ ಮುಂದೂಡಿಕೆ