ಕೊರೊನಾ ಸಂಕಷ್ಟ : ಪುಣ್ಯದ ಕೆಲಸದಲ್ಲಿ ಉಪೇಂದ್ರ ಜೊತೆ ಕೈ ಜೋಡಿಸಿದ ಸಿನಿತಾರೆಯರು
ಬೆಂಗಳೂರು: ದೇಶದಲ್ಲಿ ಕೋವಿಡ್ 2ನೇ ಅಲೆ ತಾಂಡವವಾಡ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ.. ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.. ಸ್ಯಾಂಡಲ್ ವುಡ್ , ಬಾಲಿವುಡ್ , ಕಾಲಿವುಡ್ , ಟಾಲಿವುಡ್ ನ ತಾರೆಯರು ಜನರಿಗೆ ನೆರವಾಗಿದ್ದಾರೆ.. ಸೋನು ಸೂದ್ , ಸಲ್ಮಾನ್ ಖಾನ್ , ಉಪೇಂದ್ರ , ಸುದೀಪ್ ಶ್ರೀಮುರುಳಿ, ಶೋಭರಾಜ್ , ಸಾಧುಕೋಕಿಲ ಸೇರಿದಂತೆ ಹಲವರು ಸಂಕಷ್ದ ಸಮಯದಲ್ಲಿ ಸಹಾಯಾಸ್ತ ಚಾಚಿದ್ದಾರೆ..
ಅಂದ್ಹಾಗೆ ಈ ಕೊರೊನಾದಿಂದಾಗಿ ಸಿನಿಮಾರಂಗವು ಸಂಪೂರ್ಣ ನೆಲಕಚ್ಚಿದೆ.. ಇದ್ರಿಂದಾಗಿ ಕಲಾವಿದರು , ಸಿನಿಮಾರಂಗದ ದಿನಗೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರ ನೆರವಿಗೆ ಧಾವಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಅನೇಕರು ಸಾಥ್ ನೀಡಿದ್ದಾರೆ.
ಇತ್ತೀಚೆಗೆ ಸಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದ ಉಪೇಂದ್ರ ಅವರು, ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೊರೊನಾ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ತರನ್ನು ಸಂಪರ್ಕಿಸಿ. ನಿಮ್ಮ ಉಪ್ಪಿ ಎಂದು ಸಮಾಜ ಸೇವೆ ಆರಂಭಿಸಿದ್ದರು.
ಇದೀಗ ಇವರ ಜೊತೆಗೆ ಅನೇಕ ಸಿನಿ ತಾರೆಯರು ಕೈಜೋಡಿಸಿದ್ದಾರೆ.. ಕಾಮಿಡಿ ಕಿಂಗ್ ಸಾಧುಕೋಕಿಲ , ಶೋಭರಾಜ್ , ಬಿ ಸರೋಜಮ್ಮ ಸೇರಿದಂತೆ ಹಲವರು ನೆರವಿಗೆ ಮುಂದಾಗಿದ್ಧಾರೆ.. ಈ ಬಗ್ಗೆ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ. ಬಿ. ಸರೋಜಮ್ಮ ಅವರು 4 ಲಕ್ಷ ರೂಪಾಯಿಗಳನ್ನು ನೀಡುತ್ತಿದ್ದಾರೆ. ಸಾಧುಕೋಕಿಲರವರ ನೇತೃತ್ವದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಿದ್ದಾರೆ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.