ದೇಶದಲ್ಲಿ ಮತ್ತೆ ಹೆಚ್ಚಾದ ಕೋವಿಡ್ ದೈನಂದಿನ ಪ್ರಕರಣಗಳು , 1000ದ ಗಡಿ ದಾಟಿದ ಒಮಿಕ್ರಾನ್ ಸಂಖ್ಯೆ…
ಮತ್ತೆ ದೇಶದಲ್ಲಿ ಮಹಾಮಾರಿ ಸ್ಪೋಟವಾಗುವ ಲಕ್ಷಣ ಕಾಣ್ತಿದೆ.. ಈಗಾಗಲೇ 3ನೇ ಅಲೆ ಶುರುವಾಗಿರುಂವಂತಿದೆ.. ಇಡೀ ವಿಶ್ವಾದ್ಯಂತ ಒಮಿಕ್ರಾನ್ ಆತಂಕ ಸೃಷ್ಟಿ ಮಾಡಿದೆ.. ದೇಶದಲ್ಲೂ ದಿನೇ ದಿನೇ ಒಮಿಕ್ರಾನ್ ಸಂಖ್ಯೆ ಹೆಚ್ಚಾಗ್ತಿದೆ.. ಇದರ ನಡುವೆ ಈಗ ಸುಮಾರು ದಿನಗಳಿಂದ 8 ಸಾವಿರದ ಳಗೆ ದಾಖಲಾಗ್ತಿದ್ದ ದೈನಂದಿನ ಕೇಸ್ ಗಳು ನಿನ್ನೆಯಿಂದ ಮತ್ತೆ ಹೆಚ್ಚಾಗತೊಡಗಿದೆ.. ಕಳೆದ 24 ಗಂಟೆಗಳಲ್ಲಿ 16,764 ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.. ದೇಶದಲ್ಲಿ ಒಟ್ಟು ಸೋಂಕಿಗೆ ತುತ್ತಾದವರ ಸಂಖ್ಯೆ 3,48,38,804 ಕ್ಕೆ ತಲುಪಿದೆ. 7,585 ಮಂದಿ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
ನಿನ್ನೆ 220 ಮಂದಿ ಮಹಾಮಾರಿಯಿಂದ ಉಸಿರು ನಿಲ್ಲಿಸಿದ್ದಾರೆ.. ಒಟ್ಟು ಸಾವಿನ ಸಂಖ್ಯೆ 4,81,080 ಕ್ಕೆ ತಲುಪಿದೆ. ದೇಶದಲ್ಲಿ ಈ ವರೆಗೆ 3,42,58,877 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 91,361 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.
ಒಮಿಕ್ರಾನ್ ಸೋಂಕಿತರ ಸಂಖ್ಯೆ 1,270ಕ್ಕೇರಿದೆ.. ಭಾರತದಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ಒಮಿಕ್ರಾನ್ ಪ್ರಕರಣಗಳು ದುಪ್ಪಟ್ಟಾಗ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.. ಇದೇ ಅವಧಿಯಲ್ಲಿ 320 ಮಂದಿ ಒಮಿಕ್ರಾನ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ..
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 450 ಒಮಿಕ್ರಾನ್ ಪ್ರಕರಣಗಳು, ದೆಹಲಿಯಲ್ಲಿ 320, ಕೇರಳದಲ್ಲಿ 109, ಗುಜರಾತ್ನಲ್ಲಿ 97 ಹಾಗೂ ಕರ್ನಾಟಕದಲ್ಲಿ 34 ಒಮಿಕ್ರಾನ್ ಪ್ರಕರಣಗಳಿವೆ. ಒಮಿಕ್ರಾನ್ ಸೋಂಕಿತರ ಪೈಕಿ 374 ಮಂದಿ ಗುಣಮುಖರಾಗಿದ್ದಾರೆ.