ಕೊರೊನಾ ದೈನಂದಿನ ಕೇಸ್ ಗಳ ಸಂಖ್ಯೆ ಕಡಿಮೆ… ಹೆಚ್ಚುತ್ತಲೇ ಇದೆ ಒಮಿಕ್ರಾನ್ ಸಂಖ್ಯೆ..!
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯೇನೋ ದಿನೇ ದಿನೇ ಕಡಿಮೆಯಾಗ್ತಿದೆ. ಆದ್ರೆ ಇದು ಸಮಾಧಾನಕರ ಸಂಗತಿಯೇನಲ್ಲ..
ಯಾಕಂದ್ರೆ ಕೊರೊನಾ ವೈರಸ್‌ನ ರೂಪಾಂತರಿ ತಳಿ ಓಮೈಕ್ರಾನ್ ಸೋಂಕು ಪ್ರಕರಣಗಳು ದೇಶದಲ್ಲಿ ಏರಿಕೆಯಾಗ್ತಲೇ ಇದೆ.. ದೇಶದಲ್ಲಿ ಒಟ್ಟು 422 ಓಮೈಕ್ರಾನ್ ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ ಪ್ರತಿ ಮೂರು ದಿನಗಳಿಗೆ ಒಮ್ಮೆ ಒಮಿಕ್ರಾನ್ ಪ್ರಕರಣಗಳು ದುಪ್ಪಟ್ಟಾಗ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ..
ಅಂದ್ಹಾಗೆ ದೇಶದದಲ್ಲಿ ಕಳೆದ 24 ಗಂಟೆಗಳಲ್ಲಿ 6,987 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.. ನಿನ್ನೆ 162 ಮಂದಿ ಮಹಾಮಾರಿಯಿಂದ ಉಸಿರು ನಿಲ್ಲಿಸಿದ್ದಾರೆ.. ಒಟ್ಟು ಸಾವಿನ ಸಂಖ್ಯೆ 4,79,682 ಕ್ಕೆ ತಲುಪಿದೆ. ಇದೇ ಅವಧಿಯಲ್ಲಿಯೇ 7,091 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ..
ದೇಶದಲ್ಲಿ ಈ ವರೆಗೆ 3,42,30,354 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 76,766 ಸಕ್ರಿಯ ಪ್ರಕರಣಗಳು ಭಾರತದಲ್ಲಿವೆ.








