ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 15,906 ಕೇಸ್ ಪತ್ತೆ, 561 ಸಾವು
ನವದೆಹಲಿ : ದೇಶದಲ್ಲಿ ದಿನೇ ದಿನೇ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿಕೆಯಾಗ್ತಿದೆ. ಸಮಾಧಾನಕರ ಸಂಗತಿಯಂದ್ರೆ ಸುಮಾರು 10 – 15 ದಿನಗಳಿಂದ ದೈನಂದಿನ ಕೇಸ್ ಗಳ ಸಂಖ್ಯೆ 20 ಸಾವಿರದ ಒಳಗಿದೆ. ಆದ್ರೆ ಸಾವಿನ ಸಂಖ್ಯೆ ಏರಿಕೆಯಾಗ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಹೌದು ಸುಮಾರು ದಿನಗಳಿಂದ 200 -250 ರ ಒಳಗೆ ಸಾವಿನ ಸಂಖ್ಯೆ ದಾಖಲಾಗ್ತಿತ್ತು. ಆದ್ರೆ ನಿನ್ನೆ ಸಾವಿನ ಸಂಖ್ಯೆ 600 ದಾಟಿತ್ತು. ಇಂದೂ ಕೂಡ ಸಾವಿನ ಸಂಖ್ಯೆ 500 ದಾಟಿದ್ದು, ಕೊಂಚ ಆತಂಕವಿದೆ.
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 15,906 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಅಲ್ಲದೆ 561 ಮಂದಿ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ.
ಇದರೊಂದಿಗೆ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 3,41,75,468 ಕ್ಕೆ ತಲುಪಿದೆ.
ಸೋಂಕಿನಿಂದ ಮೃತರಾದವರ ಸಂಖ್ಯೆ 4,54,269 ಕ್ಕೆ ತಲುಪಿದೆ.
ಇನ್ನು ದೇಶದಲ್ಲಿ ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 1,72,594 ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳಲ್ಲಿ 16,479 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 33,54,8,605 ಕ್ಕೆ ತಲುಪಿದೆ.