Covid19 Updates : ನಿನ್ನೆ ದೇಶದಲ್ಲಿ ಒಟ್ಟು 5,476 ಪ್ರಕರಣಗಳು ಪತ್ತೆ
ನವದೆಹಲಿ : ದೇಶದಲ್ಲಿ ಗಣನೀಯವಾಗಿ ದೈನಂದಿನ ಕೋವಿಡ್ ಕೇಸ್ ಗಳ ಸಂಖ್ಯೆ ಇಳಿಕೆಯಾಗುತ್ತಿದೆ.. ನಿನ್ನೆ ದೇಶದಲ್ಲಿ ಒಟ್ಟು 5,476 ಪ್ರಕರಣಗಳು ಪತ್ತೆಯಾಗಿದೆ. ಭಾರತದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,29,62,953 ದಾಟಿದೆ.
ಸಕ್ರಿಯ ಪ್ರಕರಣಗಳು 59,442ಕ್ಕೆ ಇಳಿದಿದೆ.
ಕಳೆದ 24 ಗಂಟೆಗಳಲ್ಲಿ 158 ಸೋಂತಿತರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 5,15,036ಕ್ಕೆ ಏರಿದೆ.
ನಿನ್ನೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ9,754 ಇದ್ದು , ಒಟ್ಟಾರೆ ಚೇತರಿಕೆ ಕಂಡವರ ಸಂಖ್ಯೆ 423884475 ಕ್ಕೆ ಏರಿದೆ.







