ಡಿಸೆಂಬರ್ ವೇಳೆಗೆ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಸಿದ್ಧ – ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ Covishield ready December
ಪುಣೆ, ಅಕ್ಟೋಬರ್19: ಡಿಸೆಂಬರ್ ವೇಳೆಗೆ ಕೋವಿಡ್-19 ಲಸಿಕೆ ‘ಕೋವಿಶೀಲ್ಡ್’ ಸಿದ್ಧವಾಗಲಿದ್ದು, ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿರುತ್ತದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ. Covishield ready December

ಭಾರತವು ಡಿಸೆಂಬರ್ 2020 ರ ವೇಳೆಗೆ ಕೊರೊನಾವೈರಸ್ ಲಸಿಕೆ ‘ಕೋವಿಶೀಲ್ಡ್’ ಪಡೆಯಬಹುದು. ಆದರೆ ಲಸಿಕೆಗಳು ಮಾರ್ಚ್ 2020 ರಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ಸಹಯೋಗದಲ್ಲಿ ಲಸಿಕೆಯ ಅಭಿವೃದ್ಧಿ ನಡೆಸುತ್ತಿರುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಬಹಿರಂಗಪಡಿಸಿದೆ. ಮಾರ್ಚ್ 2021 ರ ಹೊತ್ತಿಗೆ ಭಾರತದಲ್ಲಿ 60-70 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಾಗಲಿದೆ.
ಮಾರ್ಚ್ 2021 ರ ವೇಳೆಗೆ ಭಾರತವು ಕೋವಿಡ್-19 ಲಸಿಕೆಯನ್ನು ಪಡೆಯಬಹುದು. ಲಸಿಕೆಯ ಅಭಿವೃದ್ಧಿ ಪ್ರಕ್ರಿಯೆಯು ವೇಗವಾಗಿ ನಡೆಯುತ್ತಿರುವುದಾಗಿ ನಿಯಂತ್ರಕರು ತಿಳಿಸಿದ್ದಾರೆ ಎಂದು ಡಾ. ಜಾಧವ್ ಐಸಿಸಿಐಡಿಡಿ ಸಹಯೋಗದೊಂದಿಗೆ ಹೆಲ್ ಫೌಂಡೇಶನ್ ಆಯೋಜಿಸಿರುವ ಇಂಡಿಯಾ ಲಸಿಕೆ ಪ್ರವೇಶಿಸುವಿಕೆ ಇ-ಶೃಂಗಸಭೆಯಲ್ಲಿ ಹೇಳಿದರು.
ಭಾರತದಲ್ಲಿ ಕೋವಿಡ್ ಲಸಿಕೆಗಾಗಿ 300 ಮಿಲಿಯನ್ ಜನರ ಆಯ್ಕೆ ಪ್ರಕ್ರಿಯೆ ಪ್ರಾರಂಭ
ಪರವಾನಗಿ ಪಡೆಯಲು ಡಿಸೆಂಬರ್ ಮತ್ತು ಮಾರ್ಚ್ ನಡುವಿನ ಸಮಯ ಬೇಕಾಗುತ್ತದೆ ಎಂದು ಎಸ್ಐಐನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಸುರೇಶ್ ಜಾದವ್ ಹೇಳಿದರು.
ಪ್ರಸ್ತುತ, ಪುಣೆ ಮೂಲದ ಔಷಧ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಕೊರೊನಾವೈರಸ್ ಲಸಿಕೆಯ ಹಂತ 2 ಮತ್ತು 3 ಪ್ರಯೋಗಗಳನ್ನು ನಡೆಸುತ್ತಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರತಿವರ್ಷ 700-800 ಮಿಲಿಯನ್ ಲಸಿಕೆ ಪ್ರಮಾಣವನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.
ಲಸಿಕೆ ಅಭಿವೃದ್ಧಿಯತ್ತ ಭಾರತ ವೇಗವಾಗಿ ಸಾಗುತ್ತಿದೆ, ಎರಡು ಲಸಿಕೆ ಪ್ರಯೋಗ ಈಗಾಗಲೇ ಹಂತ -2ರಲ್ಲಿದ್ದರೆ ಮತ್ತೊಂದು ಹಂತ -3ರಲ್ಲಿದೆ ಎಂದು ಜಾಧವ್ ತಿಳಿಸಿದರು.

ಮೂರು ಲಸಿಕೆಗಳು ಭಾರತದಲ್ಲಿ ಅಭಿವೃದ್ಧಿಯ ಮುಂದುವರಿದ ಹಂತಗಳಲ್ಲಿವೆ. ಅವುಗಳಲ್ಲಿ 2 ಹಂತ II ಮತ್ತು ಒಂದು ಹಂತ -3 ರಲ್ಲಿವೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ. ದೇಶದ ಭೌಗೋಳಿಕ ವ್ಯಾಪ್ತಿ ಮತ್ತು ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಪ್ರವೇಶವನ್ನು ತ್ವರಿತವಾಗಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಪ್ರಧಾನಿ ನಿರ್ದೇಶನ ನೀಡಿದ್ದಾರೆ. ಲಾಜಿಸ್ಟಿಕ್ಸ್, ವಿತರಣೆ ಮತ್ತು ಆಡಳಿತದ ಪ್ರತಿಯೊಂದು ಹೆಜ್ಜೆಯನ್ನೂ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ








