ಮಕ್ಕಳಿಗೆ ಕೊರೊನಾ ಲಸಿಕೆ ಯಾವಾಗ..? ಉತ್ತರ ಕೊಟ್ಟ ಏಮ್ಸ್ ನಿರ್ದೇಶಕರು…!
ಕೊರೊನಾ 2ನೇ ಅಲೆ ದೇಶದ ಜನತೆಯನ್ನು ಇನ್ನಿಲ್ಲದಂತೆ ಕಾಡಿದೆ. ಈ ಅಲೆಯಲ್ಲಿ ಅಪಾರ ಪ್ರಮಾಣದ ಸಾವು-ನೋವು ಸಂಭವಿಸಿದ್ದು, ಇದರ ಜೊತೆಗೆ ಬ್ಲಾಕ್, ವೈಟ್ ಫಂಗಸ್ , ಯೆಲ್ಲೂ, ಹಸರು ಫಂಗಸ್ , ಡೆಲ್ಟಾ , ಲ್ಯಾಂಬ್ಡಾ , ಜಿಕಾ , ಕಪ್ಪಾ ವೈರಸ್ ಳ ಆಕಂತ ಜನರನ್ನ ಆತಂಕಕ್ಕೆ ಈಡು ಮಾಡಿದೆ.. ಈ ನಡುವೆ ಕೋವಿಡ್ 3ನೇ ಅಲೆ ಎಚ್ಚರಿಕೆ ನೀಡಲಾಗಿದ್ದು, ಇದರ ಪರಿನಾಮವೂ ಅಷ್ಟೇ ಭೀಕರವಾಗಿರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಲ್ಲದೇ ಮಕ್ಕಳೇ ಹೆಚ್ಚಾಗಿ ಟಾರ್ಗೆಟ್ ಆಗಲಿದ್ದಾರೆ ಎನ್ನಲಾಗ್ತಾಯಿದೆ.. ಆದ್ರೆ ಈವರೆಗೂ ಮಕ್ಕಳಿಗೆ ಲಸಿಕೆ ಯಾವಾಗ ನೀಡಲಾಗುತ್ತೆ ಅನ್ನೋದು ಕೂಡ ಗೊತ್ತಿಲ್ಲದೇ ಆತಂಕದಲ್ಲಿ ಪೋಷಕರಿದ್ದಾರೆ..
ವಿಶ್ವಾದ್ಯಂತ ಕೊರೊನಾ ವೈರಸ್ , ರೂಪಾಂತರ ತಳಿಗಳ ಹಾವಳಿಯ ನಡುವೆ ಕೊರೊನಾ ಲಸಿಕೆ ಅಭಿಯಾನವೂ ಹೆಚ್ಚಾಗಿದೆ.. ಈ ನಡುವೆ ಅನೇಕ ಲಸಿಕೆಗಳ ಬಗ್ಗೆ ಹಲವಾರು ಗೊಂದಲಗಳಿದ್ದು, ಅದ್ರಲ್ಲಿ ಚೀನೀಯ ಲಸಿಕೆಯೂ ಒಂದಾಗಿದೆ.. ಈ ನಡುವೆ ಅನೇಕರಿಗೆ ಇನ್ನೂವರೆಗೂ ಯಾವುದೇ ಲಸಿಕೆ ಮೇಲೂ ನಂಬಿಕೆ ಬಂದಿಲ್ಲ.. ಅಡ್ಡಪರಿಣಾಮಗಳಾಗಬಹುದಾದ ಆತಂಕದಲ್ಲೇ ಲಸಿಕೆ ಪಡೆಯೋದಕ್ಕೆ ಹಿಂದೂ ಮುಂದು ನೋಡ್ತಿದ್ದಾರೆ..ಇದೇ ಪರಿಸ್ಥಿ ಭಾರತದಲ್ಲೂ ಇದೆ. ಆದ್ರೆ ಈ ನಡುವೆ ಮಕ್ಕಳಿಗೆ ಲಸಿಕೆ ಯಾವಾಗ ಎಂಬ ಪ್ರಶ್ನೆ ಹಲವರದ್ದು..
ಇದೀಗ ಮಕ್ಕಳಿಗೆ ಕೊರೊನಾ ಲಸಿಕೆ ಕುರಿತಂತೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಮಹತ್ವದ ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ಮಕ್ಕಳಿಗೆ ಕೊರೊನಾ ಲಸಿಕೆ ಸಿಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಹರಡುವಿಕೆಗೆ ಇನ್ನಷ್ಟು ಬ್ರೇಕ್ ಹಾಕಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಕಿಸುವವರ ವಿರುದ್ಧ ಬೇಹುಗಾರಿಕೆ ತಂತ್ರಜ್ಞಾನ ಬಳಕೆ ಖಂಡನೀಯ : ಅಮೆರಿಕಾ
ಜೈಡಸ್ ಈಗಾಗಲೇ ತನ್ನ ಪ್ರಾಯೋಗಿಕ ಪರೀಕ್ಷೆಯನ್ನ ಪೂರ್ಣಗೊಳಿಸಿದೆ. ಈ ಲಸಿಕೆಯ ತುರ್ತು ಅನುಮೋದನೆಗಾಗಿ ಕಾಯುತ್ತಿದ್ದೇವೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಪ್ರಯೋಗಗಳು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳೊಳಗಾಗಿ ಮುಗಿಯಲೇಬೇಕು. ಅಲ್ಲದೇ ಆದಷ್ಟು ಬೇಗ ತುರ್ತು ಅನುಮೋದನೆಯನ್ನೂ ಪಡೆಯಬೇಕು. ಫೈಜರ್ ಲಸಿಕೆಗೆ ಈಗಾಗಲೇ ಎಫ್ಡಿಎ ಅನುಮೋದನೆ ಸಿಕ್ಕಾಗಿದೆ. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಿದಲ್ಲಿ ಮಾತ್ರ ಕೊರೊನಾ ಸರಪಳಿಯನ್ನ ತುಂಡು ಮಾಡಬಹುದಾಗಿದೆ ಎಂದು ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ನಾವು ನಮ್ಮದೇ ಆದ ಸ್ವಂತ ಲಸಿಕೆಗಳನ್ನ ಹೊಂದೋದು ಈ ಸಮಯದಲ್ಲಿ ನಿಜಕ್ಕೂ ಪ್ರಾಮುಖ್ಯತೆ ಪಡೆಯಲಿದೆ. ಹೀಗಾಗಿ ಭಾರತ್ ಬಯೋಟೆಕ್ ಹಾಗೂ ಜೈಡಸ್ ಗಳು ಕೂಡಲೇ ಅನುಮೋದನೆ ಪಡೆಯುವಂತಾಗಬೇಕು. ಫೈಜರ್ ಲಸಿಕೆ ಕೂಡ ಸುರಕ್ಷಿತವಾಗಿದೆ ಎಂದು ಸಾಬೀತು ಪಡಿಸುವ ಸಾಕ್ಷ್ಯಗಳು ನಮ್ಮೆದುರಿಗಿದೆ. ಸೆಪ್ಟೆಂಬರ್ ತಿಂಗಳ ವೇಳೆಗೆ ನಾವು ಮಕ್ಕಳಿಗೆ ಒಂದಕ್ಕಿಂತ ಹೆಚ್ಚು ಲಸಿಕೆಯನ್ನ ಹೊಂದಿರುತ್ತೇವೆ ಎಂಬ ನಂಬಿಕೆ ಇದೆ ಎಂದಿದ್ದಾರೆ.
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ.. ಅದ್ರಲ್ಲೂ ಇಡೀ ವಿಶ್ವಾದ್ಯಂತ ಕೊರೊನಾ 2ನೇ ಹಾವಳಿ ಸಾಕಷ್ಟು ಅವಾಂತರ ಸೃಷ್ಟಿಸಿದೆ… ಕೋಟ್ಯಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ… ಸಾವಿರಾರು ಮಕ್ಕಳು ತಂದೆ ಅಥವ ತಾಯ ಇಲ್ಲಾ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಲಕ್ಷಾಂತರ ಜನರು ಜೀವನ ಕಳೆದುಕೊಂಡಿದ್ದಾರೆ.. ಆಪ್ತರನ್ನ , ಸ್ನೇಹಿತರು , ಕುಟುಂಬದವರನ್ನ ಕಳೆದುಕೊಂಡು ಜನರು ಕೊರೊನಾ ಮಹಾಮಾರಿ ಹಾಗೂ ಅದರ ಜನ್ಮಸ್ಥಳ ಚೈನಾಗೆ ಹಿಡಿ ಶಾಪ ಹಾಕ್ತಿದ್ದಾರೆ..
ಕೊರೊನಾ ರಿಪೋರ್ಟ್ : 39,097 ಮಂದಿಗೆ ಸೋಂಕು
ಟಿಸಿಎಸ್ – 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಿರ್ಧಾರ
ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಆಫ್ ಇಂಡಿಯಾ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








