ಜುಲೈಗೆ ಇಳಿಕೆಯಾಗಲಿದೆ ಕೋವಿಡ್ 2ನೇ ಅಲೆ – ಆದ್ರೆ 3ನೇ ಅಲೆ ಅಪ್ಪಳಿಸುವುದು ಪಕ್ಕಾ..!
ದೇಶದಲ್ಲಿ ಕೋವಿಡ್ 2ನೇ ಅಲೆ ಸೃಷ್ಟಿಸಿರುವ ಭೀಕರ ಪರಿಸ್ಥಿತಿಗೆ ಜನರು ಅದ್ರಲ್ಲು ಬಡವರು ತತ್ತರಿಸಿಹೋಗಿದ್ದಾರೆ. ಒಂದೆಡೆ ಆಕ್ಸಿಜನ್ ಕೊರೆತ, ಬೆಡ್ ಕೊರತೆ ಮತ್ತೊಂದೆಡೆ , ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ , ಚಿಕಿತ್ಸೆಗೆ ಹಣವಿಲ್ಲದೇ ಪರದಾಡುವ ಸ್ಥಿತಿ ಇದೆ.. ದಿನೇ ದಿನೇ , ಸೋಂಕಿತರ ಸಂಖ್ಯೆ , ಸಾವಿನ ಸಂಖ್ಯೆ ಹೆಚ್ಚಾಗ್ತಲೇ ಇದೆ..
ಈ ನಡುವೆ ಶೀಘ್ರವೇ ಕೋವಿಡ್ 2ನೇ ಅಲೆ ತಗ್ಗುವ ಮುನ್ಸೂಚನೆ ಸಿಕ್ಕಿದೆ. ಆದ್ರೆ ದೇಶಕ್ಕೆ ಕೋವಿಡ್ 3ನೇ ಅಲೆಯ ಗಂಡಾಂತರ ಕಾದಿದೆ ಎಂಬ ಆಘಾತಕಾರ ಸಂಗತಿಯೂ ಬಹಿರಂಗವಾಗಿದೆ.. ಹೌದು… ಮೇ ಆರಂಭ ತೀವ್ರಗತಿಯಲ್ಲಿ ಏರಿಕೆ ಕಂಡಿದ್ದ ಕರೊನಾ ಸೋಂಕು ಲಾಕ್ಡೌನ್ನಿಂದ ಕೊಂಚ ನಿಯಂತ್ರಣಕ್ಕೆ ಬಂದಿದ್ದು, ಜುಲೈ ವೇಳೆಗೆ ತೀವ್ರತೆ ತಗ್ಗಲಿದೆ. ಆದರೆ, 3ರಿಂದ 5 ತಿಂಗಳಲ್ಲಿ 3ನೇ ಅಲೆ ಬರುವುದು ಪಕ್ಕಾ ಎನ್ನಲಾಗ್ತಿದೆ.
ಈಗಾಗಲೆ ಕೆಲ ದೇಶಗಳು ನಾಲ್ಕನೇ ಅಲೆ ಎದುರಿಸುತ್ತಿವೆ. ಹಾಗಾಗಿ ಇನ್ನೂ ಒಂದು ವರ್ಷ ಕೋವಿಡ್ ನಿಯಮಗಳ ಪಾಲನೆ ಅತ್ಯವಶ್ಯಕ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ವೈರಾಣು ತಜ್ಞ ಡಾ.ವಿ.ರವಿ. ಈ ಬಗ್ಗೆ ಮಾಹಿತಿ ನೀಡಿದ್ದು, ಚಳಿಗಾಲದಲ್ಲಿ ಈ ವೈರಾಣು ಮತ್ತೆ ರೂಪಾಂತರಗೊಳ್ಳುವ ಸಾಧ್ಯತೆ ಇದೆ. ಅದರ ತೀವ್ರತೆ ಮತ್ತು ಹರಡುವಿಕೆ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ.
ಜನರ ವರ್ತನೆ ಮತ್ತು ರೋಗ ಎದುರಿಸಲು ಮಾಡಿಕೊಳ್ಳುವ ಸಿದ್ಧತೆಯನ್ನು ಅವಲಂಬಿಸಿರುತ್ತದೆ. ಆದರೆ ಎಚ್ಚರ ವಹಿಸದಿದ್ದರೆ ಮಕ್ಕಳಿಗೆ ಹಾಗೂ ಹದಿಹರೆಯದವರಿಗೆ 3ನೇ ಅಲೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ. ಯಾವುದೇ ಅಲೆ ತೀವ್ರತೆ ಇಳಿಮುಖವಾದ ನಂತರ ಮತ್ತೊಂದು ಅಲೆ ಬರಲು 3-5 ತಿಂಗಳ ಅವಧಿ ಬೇಕು. ಅದರಂತೆ, ರಾಜ್ಯದಲ್ಲಿ ವರ್ಷಾಂತ್ಯ ಇಲ್ಲವೆ ಮುಂದಿನ ವರ್ಷದ ಆರಂಭದಲ್ಲಿ 3ನೇ ಅಲೆ ಎದುರಾಗುವ ಸಾಧ್ಯತೆ ಇದೆ ಎಂಬ ವಿಚಾರ ತಿಳಿಸಿದ್ಧಾರೆ.
ಅಲ್ಲದೇ ಇನ್ನೂ ಭಯಾನಕ ಸತ್ಯ ಅಂದ್ರೆ 3ನೇ ಅಲೆಯ ಟಾರ್ಗೆಟ್ ಮಕ್ಕಳೇ ಎಂದು ತಜ್ಞರು ಎಚ್ಚರಿಸಿದ್ದಾರೆ. ಮೊದಲ ಅಲೆಗೆ ಹೆಚ್ಚಿನ ಸಂಖ್ಯೆಯಲ್ಲಿ 60 ವರ್ಷ ಮೇಲ್ಪಟ್ಟವರು ಟಾರ್ಗೆಟ್ ಆಗಿದ್ದರು. 2ನೇ ಅಲೆಯಲ್ಲಿ ಮಧ್ಯ ವಯಸ್ಕರು , ಯುವಕರನ್ನ ಕೊರೊನಾ ಬಾಧಿಸಿದೆ.. ಆದ್ರೆ 3ನೇ ಅಲೆಯಲ್ಲಿ ಮಕ್ಲಳನ್ನೇ ಹೆಚ್ಚಾಗಿ ಬಾಧಿಸಲಿದೆ ಎನ್ನಲಾಗಿದೆ. ಅದಕ್ಕೆ ಮುಖ್ಯ ಕಾರಣ 18 ವರ್ಷದ ಕೆಳಗಿನ ಮಕ್ಕಳಿಗೆ ಲಸಿಕೆ ನೀಡದೇ ಇರುವುದು ಎನ್ನಲಾಗ್ತಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








